Sunday, September 8, 2024

SSC ಹಗರಣದಲ್ಲಿ ಪಾರ್ಥ ಚಟರ್ಜಿಯನ್ನು ಬಂಧಿಸಬಹುದಾದರೆ, ನೀಟ್ ಹಗರಣದಲ್ಲಿ ಧರ್ಮೇಂದ್ರ ಪ್ರಧಾನ್ ಬಂಧನವೇಕಿಲ್ಲ?

Most read

ನೀಟ್ ಮತ್ತು ನೆಟ್-ಯುಜಿ ಪರೀಕ್ಷೆ ಹಗರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಒತ್ತಾಯಿಸಿದೆ.

“2022ರಲ್ಲಿ ಜುಲೈ 21ರ ಹುತಾತ್ಮರ ದಿನಾಚರಣೆಯ ಒಂದು ದಿನದ ನಂತರ ಎಸ್‌ಎಸ್‌ಸಿ ಮತ್ತು ಟಿಇಟಿ ಹಗರಣ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಾರ್ಥ ಚಟರ್ಜಿ ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ತೃಣಮೂಲ ಕಾಂಗ್ರೆಸ್ ಇಂತಹ ಯಾವುದೇ ತಪ್ಪು ಅಥವಾ ದುಷ್ಕೃತ್ಯಗಳನ್ನು ಸಹಿಸುವುದಿಲ್ಲ. ಆದರೆ, ಕೇಂದ್ರೀಯ ಸಂಸ್ಥೆಗಳು ಪಾರ್ಥ ಚಟರ್ಜಿಯವರ ಮನೆ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಬಹುದಾದರೆ, ಸ್ವತಂತ್ರ ಭಾರತದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ದೊಡ್ಡ ಹಗರಣವಾದ ನೀಟ್ ಮತ್ತು ನೆಟ್-ಯುಜಿ ಹಗರಣ ಆರೋಪಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಏಕೆ ಬಂಧಿಸಬಾರದು ಎಂದು ನಾವು ಕೇಳಲು ಬಯಸುತ್ತೇವೆ?” ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಅಭಿಷೇಕ್‌ಗೆ ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಕಾಂತ ಮಜುಂದಾರ್, ಅಭಿಷೇಕ್ ಬ್ಯಾನರ್ಜಿ ಅವರು ಎರಡು ವಿಭಿನ್ನ ವಿಷಯಗಳನ್ನು ಮಿಶ್ರಣ ಮಾಡುತ್ತಿದ್ದಾರೆ. ಬಂಗಾಳದ ಎಸ್‌ಎಸ್‌ಸಿ ಮತ್ತು ಟಿಇಟಿ ಹಗರಣದಲ್ಲಿ ರಾಜ್ಯ ಸರ್ಕಾರ ಮತ್ತು ಆಡಳಿತ ನೇರವಾಗಿ ಭಾಗಿಯಾಗಿದೆ. NEET ಅಥವಾ NET ವಿಷಯದಲ್ಲಿ, ಪ್ರತಿಪಕ್ಷಗಳು ಸಹ ಯಾವುದೇ ಕೇಂದ್ರ ಸಚಿವ ಅಥವಾ ಸರ್ಕಾರದ ಮೇಲೆ ಆರೋಪ ಮಾಡಲು ಸಾಧ್ಯವಾಗಲಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಕೆಲ ಆರೋಪಗಳಿದ್ದು, ಒಂದೇ ಎಫ್‌ಐಆರ್ ದಾಖಲಾಗಿದೆ. ನಾವು ಐಐಟಿ-ಮದ್ರಾಸ್ ಮೂಲಕ ವಿವರವಾದ ಮೌಲ್ಯಮಾಪನವನ್ನು ನಡೆಸಿದ್ದೇವೆ ಮತ್ತು ಯಾವುದೇ ದುಷ್ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಿದ್ದು, ಸಚಿವರು ನಾಳೆ ಅಥವಾ ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಉತ್ತರ ಕೊಡಲಿದ್ದಾರೆ ಎಂದು ಹೇಳಿದ್ದಾರೆ.

ಇಂದಿನಿಂದ ಪ್ರಾರಂಭವಾಗಲಿರುವ ಸಂಸತ್ ಬಜೆಟ್ ಅಧಿವೇಶನದಲ್ಲಿ NEET ಮತ್ತು NET-UG ಪರೀಕ್ಷೆ ಹಗರಣದ ಇತರ ವಿಷಯಗಳ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಕೆ ಸಿಲುಕಿಸಲು ಎಲ್ಲಾ ತಯಾರಿ ಮಾಡಿದೆ.

More articles

Latest article