ದೇಶದ ಶ್ರೀಮಂತ, ಬಡ ಮುಖ್ಯಮಂತ್ರಿ ಯಾರು? ಸಿಎಂ ಸಿದ್ದರಾಮಯ್ಯ ಅವರ ಆಸ್ತಿ ಎಷ್ಟಿದೆ?

Most read

ನವದೆಹಲಿ: ಭಾರತದ ಅತಿ ಶ್ರೀಮಂತ ಉಖ್ಯಮಂತ್ರಿಯಾರು? ಬಡ ಮುಖ್ಯಮಂತ್ರಿ ಯಾರು? ಮುಖ್ಯಮಂತ್ರಿಗಳ ಆಸ್ತಿಯನ್ನು ಪಟ್ಟಿ ಮಾಡಿರುವ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್‌ (ADR), ಯಾವ ಮುಖ್ಯಮಂತ್ರಿ ಆಸ್ತಿ ಎಂಬ ವಿವರವನ್ನು ಪ್ರಕಟಿಸಿದೆ. ಎಡಿಆರ್‌ ವರದಿ ಪ್ರಕಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶ್ರೀಮಂತ ಮುಖ್ಯಮಂತ್ರಿಯಾದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡ ಮುಖ್ಯಮಂತ್ರಿ ಎಂದು ಗುರುತಿಸಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ರೂ.931 ಕೋಟಿ ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತ ಹಾಗೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು ರೂ.15 ಲಕ್ಷ ಆಸ್ತಿಯೊಂದಿಗೆ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಯಾಗಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖುಂಡು ಅವರು 2ನೇ ಅತಿ ಶ್ರೀಮಂತ ಮುಖ್ಯಮಂತ್ರಿ ಎನಿಸಿದ್ದು, ಇವರ ಒಟ್ಟು ಆಸ್ತಿ ರೂ.332 ಕೋಟಿಯಷ್ಟಿದೆ. 3ನೇ ಸ್ಥಾನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದು, ಇವರ ಒಟ್ಟು ಆಸ್ತಿ ಮೌಲ್ಯ ರೂ.51 ಕೋಟಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಆಸ್ತಿ ರೂ. 55 ಲಕ್ಷ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ತಿ ರೂ. 1.18 ಕೋಟಿಗಳಷ್ಟಿದೆ. ಪೇಮಾ ಅವರು ರೂ.180 ಕೋಟಿ ಸಾಲ ಹೊಂದಿದ್ದರೆ, ಇವರ ನಂತರದ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದು, ರೂ.23 ಕೋಟಿ ಸಾಲ ಪಡೆದಿದ್ದಾರೆ. ನಾಯ್ಡು ರೂ. 10 ಕೋಟಿ ಸಾಲ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.  13 ಜನ ಮುಖ್ಯಮಂತ್ರಿಗಳು (ಶೇ 42ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. 10 ಮುಖ್ಯಮಂತ್ರಿಗಳು (ಶೇ 32ರಷ್ಟು) ತಮ್ಮ ವಿರುದ್ಧ ಕೊಲೆ, ಅಪಹರಣ, ಲಂಚ ಮತ್ತು ಬೆದರಿಕೆ ಸೇರಿದಂತೆ ಗಂಭೀರ ಸ್ವರೂಪದ ಪ್ರಕರಣಗಳನ್ನು ಹೊಂದಿದ್ದಾರೆ.

ದೇಶದ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸರಾಸರಿ ಆಸ್ತಿ ಮೌಲ್ಯ ರೂ.52.59 ಕೋಟಿ ಎಂದು ಅಂದಾಜು ಮಾಡಲಾಗಿದೆ.  ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯವು 2023–24ರಲ್ಲಿ ಸರಾಸರಿ ರೂ. 1,85,854 ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಅವರ ತಲಾ ಆದಾಯದ ಸರಾಸರಿಯು ರೂ. 13,64,310 ಇದ್ದು, ಇದು ದೇಶದ ನಾಗರಿಕರ ತಲಾದಾಯಕ್ಕಿಂತ 7.3 ಪಟ್ಟು ಹೆಚ್ಚಳವಾಗಿದೆ. ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆದಾಯ ರೂ.1,630 ಎಂದು ಎಡಿಆರ್‌ ವರದಿ ಹೇಳಿದೆ.

More articles

Latest article