ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಬಗ್ಗೆ ಸಂತೋಷ್ ಲಾಡ್ ಏನಂದ್ರು..?

Most read

ಧಾರವಾಡ: ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಬಿಸಿ ಹೆಚ್ಚಾಗಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಸ್ಪರ್ಧೆ ವಿರೋಧಿಸಿದ್ದ ಸ್ವಾಮೀಜಿ ಇದೀಗ ಅವರ ವಿರುದ್ಧ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದು, ಸ್ವಾಮೀಜಿ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಅವರ ಸ್ಪರ್ಧೆಯಿಂದ ಯಾರಿಗೆ ಲಾಭ ಆಗುತ್ತೆ. ಯಾರಿಗೆ ನಷ್ಟ ಆಗುತ್ತದೆ ಎಂದು ಹೇಳಲಾಗದು ಎಂದಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿಗೆ ಧಾರವಾಡ ಜಿಲ್ಲೆಯಲ್ಲೇ ಲಕ್ಷಾಂತರ ಭಕ್ತರಿದಾರೆ. ಚೆನ್ನಾಗಿ ಮಾತನಾಡುವ ಶಕ್ತಿ ಅವರಿಗಿದೆ. ಇದು ಮೊದಲ ಪ್ರಯೋಗ. ಇದು ಯಾವ ರೀತಿ ರಿಸಲ್ಟ್ ಕೊಡುತ್ತೇ ಹೇಳಲಾಗದು. ನಾವು ಅವರ ಅಶೀರ್ವಾದದೊಂದಿಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ. ಅವರೂ ಸ್ಪರ್ಧೆ ಮಾಡಿದ್ದರೂ ನಾವು ಆಶೀರ್ವಾದ ಕೋರುತ್ತೇವೆ. ಇದು ಮೊದಲ ಸಲ ಈ ರೀತಿಯ ಪ್ರಯೋಗ ಆಗುತ್ತಿದೆ.

ಓರ್ವ ಪ್ರಭಾವ ಸ್ವಾಮೀಜಿ ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದು ಇದು ಮೊದಲ ಬಾರಿಗೆ. ಅವರದು ಸೆಕ್ಯೂಲರ್ ಮಠ. ಎಲ್ಲ ಸಮಾಜದವರು ಅವರ ಬೆಂಬಲಿಗರಿದ್ದಾರೆ. ಅವರು ಯುನಿವರ್ಸಲ್ ಸ್ವಾಮೀಜಿ. ಲಿಂಗಾಯತ, ಹಿಂದೂ, ಮುಸ್ಲಿಂ, ಸಿಖ್ ಎಲ್ಲ ಸಮಾಜದವರು ಅವರ ಅನುಯಾಯಿ ಇದಾರೆ. ಯಾರಿಗೆ ಲಾಭ-ನಷ್ಟ ಲೆಕ್ಕಾಚಾರ ಮಾಡಲು ಆಗದು. ಆದರೆ ಬಿಜೆಪಿಗೆ ಇದು ಹಿನ್ನೆಡೆ ಆಗಿಯೇ ಆಗುತ್ತದೆ. ಯಾಕಂದ್ರ ಜನ ಅವರಿಂದ ಬೇಸತ್ತು ಹೋಗಿದ್ದಾರೆ.

ಪ್ರಹ್ಲಾದ ಜೋಶಿ ಮೊದಲು ಅಡ್ವಾಣಿ, ವಾಜಪೇಯಿ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರನ್ನು ಮರೆತಿದ್ದಾರೆ. ಬಿಜೆಪಿಯವರು ಯಾರದ್ದು ನಡೆಯುತ್ತೋ ಅವರ ಪಿಕ್ಚರ್ ಹಿಡಕೊಂಡ ಹೋಗಿ ಬಿಡ್ತಾರೆ. ಪ್ರಹ್ಲಾದ ಜೋಶಿ ಈಗ ಮೋದಿ ಬಗ್ಗೆ ಅಷ್ಟೇ ಮಾತನಾಡುತ್ತಿದ್ದಾರೆ. ಯಾರ ಪಿಕ್ಚರ್ ನಡೆಯುತ್ತದೆ ಅವರನ್ನು ಹಿಡಕೊಂಡು ಹೋಗ್ತಾರೆ. ಹೀಗಾಗಿ ಜನ ಈ ಸಲ ಪಾಠ ಕಲಿಸುತ್ತಾರೆ. ಅವರ ಸ್ಪರ್ಧೆಯ ಎಫೆಕ್ಟ್ ಫಲಿತಾಂಶದ ದಿನವೇ ಆಗುತ್ತದೆ. ಇಂತಹ ಪ್ರಯೋಗದ ಬಗ್ಗೆ ನಮಗೆ ಅನುಭವವೂ ಇಲ್ಲ. ಲಿಂಗಾಯತರೆಲ್ಲ ಬಿಜೆಪಿಗೆ ಹಾಕ್ತಾರೆ ಅಂತಾ ಹೇಳಲಾಗದು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಇನ್ನು ದಿಂಗಾಲೇಶ್ವರ ಸ್ವಾಮೀಜಿ ಭೇಟಿ ವಿಚಾರವಾಗಿ ಮಾತನಾಡಿ, ನಾವು ಪ್ರಚಾರ ಶುರು ಮಾಡಿದಾಗ ಅವರು ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರು ಚರ್ಚೆಗಳನ್ನು ನಡೆಸಿದ್ದರು. ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಅದಾಗಲೇ ನಾವು ಅಸೂಟಿ ಪ್ರಚಾರ ಶುರು ಮಾಡಿದ್ವಿ. ಹೀಗಾಗಿ ಅವರನ್ನು ಭೇಟಿಯಾಗಲು ಆಗಿಲ್ಲ. ಆ ವಿಷಯದಲ್ಲಿ ನಾವು ಹೆಲ್ಪಲೆಸ್ ಆಗಿ ಬಿಟ್ವಿ. ಆದರೆ ಅವರ ಭಾವನೆಗಳನ್ನು ಮಾತ್ರ ಅರ್ಥ ಮಾಡಿಕೊಂಡಿದ್ದೇವು ಎಂದಿದ್ದಾರೆ.

More articles

Latest article