ಬಾಲಯ್ಯ ಬಗ್ಗೆ ಅವರ ಅಳಿಯ ಹೇಳಿದ್ದೇನು..?

Most read

ನಟ ಬಾಲಯ್ಯ ಬಗ್ಗೆ ಇತ್ತಿಚೆಗೆ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವೇದಿಕೆ ಮೇಲೆಯೇ ನಟಿ ಅಂಜಲಿಯನ್ನು ತಳ್ಳಿದ್ದರು. ಈ ವಿಡಿಯೋಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗುತ್ತದೆ. ಆದರೆ ನಾವಿಬ್ಬರು ಒಳ್ಳೆ ಫ್ರೆಂಡ್ಸ್ ಅಂತ ಹೇಳಿ ಅಂಜಲಿ ಆ ವಿಚಾರವನ್ನು ಅಲ್ಲಿಗಲ್ಲಿಗೆ ನಿಲ್ಲಿಸಿದ್ದರು. ಆದರೆ ಮಾವನ ಬಗ್ಗೆ ಇದೀಗ ಅಳಿಯ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಬಾಲಯ್ಯ ಕೇವಲ ನಟ ಮಾತ್ರವಲ್ಲ, ಶಾಸಕ ಕೂಡ. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಬಾಲಯ್ಯ ಅವರು ಕುಡಿದು ಬಂದಿದ್ದರು. ಅದಕ್ಕೆ ಆ ರೀತಿ ನಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಜೊತೆಗೆ ಒಬ್ಬ ಶಾಸಕನಾಗಿ, ಹಿರಿಯ ನಟನಾಗಿ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಅವರ ಅಳಿಯ ಕೂಡ ಬಾಲಯ್ಯ ಅವರು ಕುಡಿದು ಓಡಾಡುವ ವಿಚಾರವನ್ನು ತಿಳಿಸಿದ್ದಾರೆ.

ಬಾಲಯ್ಯ ಅವರ ಅಳಿಯ ಭರತ್ ಮಾತನಾಡಿದ್ದು, ನಮ್ಮ ಮಾವ ಮಾನ್ಷನ್ ಹೌಸ್ ಕುಡಿಯುತ್ತಾರೆ ಎಂದು ತಿಳಿದ ಮೇಲೆ ಆ ಕಂಪನಿಯ ಸ್ಟಾಕ್ಸ್ ಮೌಲ್ಯ ಹೆಚ್ಚಾಯಿತು ಎಂದಿದ್ದಾರೆ. ಬಿಸಿ ನೀರಲ್ಲಿ ಬೆರೆಸಿ ಕುಡಿಯುತ್ತಾರಂತೆ ಹೌದಾ ಎಂದರೆ ಹೌದೌದು ಎಂದಿದ್ದಾರೆ. ಮಾವನ ಬಳಿ ಸದಾ ಒಂದು ಬ್ಯಾಗ್ ಇರುತ್ತದೆ. ಅದರಲ್ಲಿ ಮದ್ಯದ ಬಾಟೆಲ್ ಹಾಗೂ ಬಿಸಿನೀರಿನ ಬಾಟೆಲ್ ಇರುತ್ತದೆ. ಎಲ್ಲಿಗೆ ಹೋದರೂ ಆ ಬ್ಯಾಗ್ ಇರಬೇಕು. ಅಮೆರಿಕಾಗೆ ಹೋದರೂ ಆ ಬ್ಯಾಗ್ ಅವರ ಕೈನಲ್ಲಿ ಇರುತ್ತದೆ’ ಎಂದಿದ್ದಾರೆ.

ಇದು ಹಳೆಯ ಸಂದರ್ಶನದ ವಿಡಿಯೋ ಆಗಿದ್ದು, ಮೊನ್ನೆ ಕಾರ್ಯಕ್ರಮದಲ್ಲಿ ನಡೆದ ಘಟನೆಗೆ ಹೋಲಿಕೆ ಮಾಡಿ, ಚರ್ಚೆ ಶುರು ಮಾಡಿದ್ದಾರೆ.

More articles

Latest article