ಚೆನ್ನೈ: ಪತ್ನಿ ಅಶ್ಲೀಲ ವಿಡಿಯೊ ವೀಕ್ಷಿಸುವುದು, ಹಸ್ತಮೈಥುನ ಮಾಡಿಕೊಳ್ಳುವುದು ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇಂದು ತೀರ್ಪು ನೀಡಿದೆ.
ಅಶ್ಲೀಲ ವಿಡಿಯೊ ವೀಕ್ಷಿಸುವುದು ವೀಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದು ನಿಜ. ಏಕೆಂದರೆ ಅದು ಮಹಿಳೆಯರನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸಲಾಗಿರುತ್ತದೆ. ಆದರೂ ಪತ್ನಿ ಖಾಸಗಿಯಾಗಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸಿದರೆ, ಅದು ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಆರ್.ಪೂರ್ಣಿಮಾ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಪತ್ನಿ ತನ್ನ ಸಂಗಾತಿಯನ್ನು ಸೇರುವಂತೆ ಒತ್ತಾಯಿಸದೆ ಖಾಸಗಿಯಾಗಿ ಅಶ್ಲೀಲ ವಿಡಿಯೊಗಳನ್ನು ನೋಡಿದರೆ ಅದು ವೈವಾಹಿಕ ಕ್ರೌರ್ಯವಾಗುವುದಿಲ್ಲ. ಹಾಗೆಯೇ, ಪತ್ನಿ ಹಸ್ತಮೈಥುನ ಮಾಡಿಕೊಳ್ಳುತ್ತಾಳೆ ಎಂಬ ಆರೋಪವು ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ ಎಂದೂ ನ್ಯಾಯಪೀಠ ತಿಳಿಸಿದೆ.