ಉಪೇಂದ್ರ ಮತ್ತು ಪ್ರೇಮಾ ನಡುವೆ ಪ್ರೀತಿ ಇತ್ತಾ..? ನೇರಾ ನೇರಾ ಪ್ರಶ್ನೆಗೆ ನಟಿ ಕೊಟ್ಟ ಉತ್ತರವೇನು..?

Most read

ಎ ಸಿನಿಮಾದ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡು ಇತ್ತಿಚೆಗೆ ಅದೆಷ್ಟು ವೈರಲ್ ಆಯ್ತು ಅಂದ್ರೆ ಎಲ್ಲರ ಪ್ರೊಫೈಲ್ ನಲ್ಲೂ ಒಂದು ರೀಲ್ಸ್ ಆದ್ರೂ ಇರ್ತಾ ಇತ್ತು. ಅಷ್ಟು ವೈರಲ್ ಆಗಿತ್ತು. ಜೊತೆಗೆ ಈ ಸಿನಿಮಾ‌ ಮಾಡಿದಾಗಲೂ ಉಪೇಂದ್ರ ಹಾಗೂ ಪ್ರೇಮ ಅವರ ನಡುವೆ ಸಂಥಿಂಗ್ ಸಂಥಿಂಗ್ ಇತ್ತು ಎಂಬ ಗಾಳಿ ಸುದ್ದಿಯೂ ಜೋರಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಲು ಈ ಹಾಡು ಮಾಡಲಾಗಿತ್ತು ಎಂಬ ಮಾತು ಇತ್ತು. ಅದಕ್ಕೆಲ್ಲ ಸ್ವತಃ ಪ್ರೇಮಾ ಅವರೇ ಉತ್ತರ ನೀಡಿದ್ದಾರೆ.

ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ ಪ್ರೇಮಾ, ಆ ಸಿನಿಮಾ ಮಾಡಿದ ಉಪೇಂದ್ರ ಅವರೇ ಕರಿಮಣಿ ಮಾಲೀಕ. ಆ ಸಿನಿಮಾ ಬಂದಾಗ, ಹಾಡು ಬಂದಾಗ ಅದು ಸ್ಲೋ ಆಗಿತ್ತು. ಈಗ ಅದನ್ನ ರಿಮಿಕ್ಸ್ ಮಾಡಿದ್ದಾರೆ. ನಂಗೆ ಗೊತ್ತಿಲ್ಲ ಉಪೇಂದ್ರ ಅವರ ತಲೆಯಲ್ಲಿ ಏನಿತ್ತು ಅಂತ. ಆದರೆ ಸಾಹಿತ್ಯ ಮಾತ್ರ ಹಾಗೆ ಇತ್ತು, ಹಾಡು ಕೂಡ ಚೆನ್ನಾಗಿ ಬಂತು. ನಾವಿಬ್ಬರೂ ವಿರೋಧಿಗಳಲ್ಲ. ನಮ್ಮಿಬ್ಬರಿಗೂ ಕೆಲಸ ಮಾಡುವ ಹಸಿವಿತ್ತು. ಲವ್ ಮಾಡುವ ಆಲೋಚನೆ ಇರುತ್ತಿರಲಿಲ್ಲ. ಆದರೆ ಅವರ ಹಾರ್ಡ್ ವರ್ಕ್ ನನಗೆ ಇಷ್ಟವಾಗುತ್ತಿತ್ತು ಎಂದಿದ್ದಾರೆ.

ಇಬ್ಬರ ನಡುವೆ ಪ್ರೀತಿ ಇತ್ತ ಎಂಬ ಪ್ರಶ್ನೆಗೆ ನಾವಿಬ್ಬರು ಒಳ್ಳೆಯ ಸ್ನೇಹಿತರು. ಎರಡ್ಮೂರು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದೆವು. ಆದರೆ ನಮ್ಮ ನಡುವೆ ಅಂತಹದ್ದು ಏನು ಇರಲಿಲ್ಲ. ಗುರುಕಿರಣ್ ಆಗಲಿ, ಉಪೇಂದ್ರ ಅವರಾಗಲಿ ಆಗ ಏನು ಯೋಚಿಸಿದರು ಎಂಬುದು ನನಗೆ ಗೊತ್ತಿಲ್ಲ‌. ಆದರೆ ನಮ್ಮಿಬ್ಬರ ನಡುವೆ ಏನು ಇರಲಿಲ್ಲ. ಒಂದು ಸಿನಿಮಾ ಹಿಟ್ ಆದರೆ ಮುಂದೇ ಏನು ಅಂತ ಯೋಚನೆ ಮಾಡುತ್ತಿದ್ದೆ ಅಷ್ಟೇ. ಪ್ರೀತಿಗೀತಿ ಏನು ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

More articles

Latest article