ಯುದ್ಧವೆಂದರೆ ಬಾಲಿವುಡ್ ಸಿನಿಮಾ ಅಲ್ಲ: ಸೇನೆಯ ನಿವೃತ್ತ ಮುಖ್ಯಸ್ಥ ನರವಣೆ

Most read

ಪುಣೆ: ಯುದ್ಧವೆಂದರೆ ಪ್ರಣಯವೂ ಅಲ್ಲ ಮತ್ತು ಬಾಲಿವುಡ್‌ ಸಿನಿಮಾ ಕೂಡ ಅಲ್ಲ ಎಂದು ಸೇನಾಪಡೆಯ ನಿವೃತ್ತ ಮೇಜರ್‌ ಜನರಲ್‌ ಮನೋಜ್‌ ಮುಕುಂದ್ ನರವಣೆ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿರುವುದನ್ನು ಟೀಕಿಸುತ್ತಿರುವವರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ಪುಣೆಯಲ್ಲಿ ‘ಇನ್‌ಸ್ಟಿಟ್ಯೂಟ್‌ ಆಫ್‌ ಕೋಸ್ಟ್‌ ಅಕೌಂಟಂಟ್ಸ್‌ ಆಫ್‌ ಇಂಡಿಯಾ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದೇಶ ಬಂದರೆ ಯುದ್ಧಕ್ಕೆ ತೆರಳಲು ಸಿದ್ಧವಿದ್ದೇನೆ. ಆದಾಗ್ಯೂ, ರಾಜತಾಂತ್ರಿಕ ಮಾರ್ಗವೇ ತಮ್ಮ ಮೊದಲ ಆಯ್ಕೆ ಎಂದು ಹೇಳಿದ್ದಾರೆ.

ಶೆಲ್‌ ದಾಳಿಗಳನ್ನು ಕಂಡು, ರಾತ್ರೋರಾತ್ರಿ ಆಶ್ರಯ ಶಿಬಿರಗಳಿಗೆ ಓಡಬೇಕಾದ ಸ್ಥಿತಿಯಲ್ಲಿರುವ ಮಹಿಳೆಯರು, ಮಕ್ಕಳು ಸೇರಿದಂತೆ ಗಡಿ ಪ್ರದೇಶಗಳ ನಿವಾಸಿಗಳಲ್ಲಿ ಆತಂಕವಿದೆ ಎಂದಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಆ ಆಘಾತವು ತಲೆಮಾರುಗಳವರೆಗೆ ಇರಲಿದೆ. ಅದನ್ನು ಪಿಟಿಎಸ್‌ಡಿ (Post Traumatic Stress Disorder) ಎಂದೂ ಹೇಳಲಾಗುತ್ತದೆ. ಅಂತಹ ಭೀಕರ ದೃಶ್ಯಗಳನ್ನು ಕಣ್ಣಾರೆ ಕಂಡವರು, 20 ವರ್ಷಗಳ ನಂತರವೂ ಬೆಚ್ಚಿ ಬೀಳುತ್ತಾರೆ. ಅಂತಹವರಿಗೆ ಮನೋವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ನರವಣೆ ತಿಳಿಸಿದ್ದಾರೆ.

More articles

Latest article