ಚೈತ್ರಾ ಜೆ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ. ಡ್ರೆಸ್ ತೊಡುವುದರಲ್ಲಿ ಮಾತ್ರವಲ್ಲ ಮಾತಲ್ಲೂ ಅಷ್ಟೇ ಖಡಕ್. ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದಲ್ಲಿ ಸುರಭಿ ಎಂಬ ವೇಶ್ಯೆ ಪಾತ್ರದಲ್ಲಿ ನಟಿಸಿದ್ದಾರೆ. ಈ ವೇಶ್ಯೆ ಪಾತ್ರ ಒಪ್ಪಿಕೊಂಡಿದ್ದು ಹೇಗೆ..? ಮನೆಯವರಿಂದ ಸಪೋರ್ಟ್ ಸಿಕ್ಕಿದ್ದು ಹೇಗೆ ಎಂಬುದೆಲ್ಲವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ನಿರ್ದೇಶಕ ಹೇಮಂತ್ ಅವರು ನನ್ನನ್ನು ಆಡಿಷನ್ ಗೆ ಕರೆದರು. ನಾನು ಟೀ ಶರ್ಟ್, ಜೀನ್ಸ್ ಧರಿಸಿ ಹೋಗಿದ್ದೆ, ಸೀರೆಯಲ್ಲಿ ಬರುವುದಕ್ಕೆ ಹೇಳಿದರು. ಎರಡು ದಿನ ಬಿಟ್ಟು ಸೀರೆ ಉಟ್ಟು ಹೋದೆ. ಮನು ಇದ್ದಾನೆ ಅಂದುಕೊಳ್ಳಿ. ವೇಶ್ಯೆಯರ ರೀತಿ ತುಟಿಗೆ ಬಣ್ಣ ಇಲ್ಲ, ಎದೆ ಸೀಳು ತೋರಿಸುವಂತಿಲ್ಲ. ಆದರೆ ಗ್ರಾಹಕರನ್ನು ಸೆಳೆಯಬೇಕು ಎಂದರು. ಆ ಟಾಸ್ಕ್ ಅನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡೆ. ನನ್ನ ಆಕ್ಟಿಂಗ್ ನೋಡಿ ನಿರ್ದೇಶಕ ಹೇಮಂತ್ ಮುಗುಳ್ನಕ್ಕರು. ನನ್ನ ಬಳಿಕ ಮತ್ತಷ್ಟು ಜನ ಆಡಿಷನ್ ಕೊಟ್ಟರು. ಆದರೆ ಕಡೆಗೆ ನಾನೇ ಆಯ್ಕೆಯಾದೆ. ನಿರ್ದೇಶಕರು ಆಯ್ಕೆಯಾದ ವಿಚಾರ ತಿಳಿಸಿದರು.
ಸಿನಿಮಾದಲ್ಲಿ ಸ್ಕಿನ್ ಶೋ ಇದೆ, ಕಿಸ್ಸಿಂಗ್ ಸೀನ್ ಇದೆ. ನೀವೇ ನಿರ್ಧಾರ ಮಾಡಿ ಸಹಿ ಹಾಕಿ ಎಂದು ಹೇಳಿದರು. ಕಿಸ್ಸಿಂಗ್ ಸೀನ್ ಮಾಡೋದಾ..? ಬೇಡ್ವಾ ಎಂಬ ಗೊಂದಲದಲ್ಲಿ ಇದ್ದೆ. ಮಾಡಿದರೆ ಚೆನ್ನಾಗಿ ಮಾಡಬೇಕು ಎಂಬ ಲೆಕ್ಕಚಾರದಲ್ಲಿದ್ದೆ. ರಾಜ್ ಬಿ ಶೆಟ್ಟಿ ಕೇಳಿದಾಗ ಯೋಚಿಸಿ ಮಾಡು ಎಂದರು. ನನ್ನ ಸಹೋದರನಿಗೆ ಹೇಳಿದಾಗ ರಕ್ಷಿತ್ ಶೆಟ್ಟಿ ಜೊತೆಗೆ ಕಿಸ್ಸಿಂಗ್ ಸೀನ್ ಹಾ..?ನಿನಗೆ ಬುದ್ದಿ ಇಲ್ವಾ ಇಷ್ಟೊಂದು ಯೋಚಿಸ್ತೀಯಾ..? ಒಪ್ಪಿಕೋ ಎಂದರು. ಅದೇ ಸಮಯಕ್ಕೆ ಅಮ್ಮ ಬಂದರು. ಅವರ ಬಳಿ ಕೇಳಿದಾಗಲೂ, ಹರೇ ಹಂಗಿದ್ರೆ ಮಾಡೆ. ಯಾರಾದರೂ ಏನಾದರೂ ಕೇಳಿದರೆ ನಾನು ನೋಡಿಕೊಳ್ಳುತ್ತೀನಿ ಎಂದರು. ಹೀಗಾಗಿ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡೆ ಎಂದಿದ್ದಾರೆ.