Tuesday, December 10, 2024

ಬೆಂಗಳೂರಿನಲ್ಲಿ ಅಸ್ಸಾಂ ಮೂಲದ ವ್ಲಾಗರ್‌ ಭೀಕರ ಹತ್ಯೆ; ಇರಿದು ಕೊಲೆ ಮಾಡಿ ಪರಾರಿಯಾದ ಪ್ರಿಯಕರ

Most read

ಬೆಂಗಳೂರು: 22 ವರ್ಷದ ವ್ಲಾಗರ್‌ ಹಾಗೂ ಖಾಸಗಿ ಕಂಪನಿ ಉದ್ಯೋಗಿಯೊಬ್ಬರನ್ನು ಬೆಂಗಳೂರಿನ ಹೋಟೆಲ್‌ ವೊಂದರಲ್ಲಿ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಮಾಯಾ ಗಗೋಯಿ ಹತ್ಯೆಗೀಡಾದ ದುರ್ದೈವಿ. ಖಾಸಗಿ ಕಂಪನಿ ಉದ್ಯೋಗಿಯೂ ಆಗಿರುವ ಈಕೆ ಕೋರಮಮಂಗಲದಲ್ಲಿ ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದರು. ನ.22 ರಂದು ಮಾಯಾ ಅವರು ತಮ್ಮ ಸ್ನೇಹಿತ ಕೇರಳ ಮೂಲದ ಅರ್ನವ್‌ ಹಾರ್ನೊಯ್‌ ಅವರೊಂದಿಗೆ ಇಂದಿರಾನಗರದ ಹೋಟೆಲ್‌ ರಾಯಲ್‌ ಲಿವಿಂಗ್‌ ಗೆ ಆಗಮಿಸಿದ್ದರು.

ಮಂಗಳವಾರ ತಿಂಡಿಯ ಆರ್ಡರ್‌ ತೆಗೆದುಕೊಳ್ಳಲು ರೂಂನ ಕಾಲಿಂಗ್‌ ಬೆಲ್‌ ಮಾಡಿದಾಗ ಬಾಗಿಲು ತೆರೆದಿಲ್ಲ. ಹೋಟೆಲ್‌ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅರ್ನವ್‌ ಗಡಿಬಿಡಿಯಲ್ಲಿ ಹೋಟೆಲ್‌ ನಿಂದ ಹೊರಹೋಗಿರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಹೋಟೆಲ್‌ ಸಿಬ್ಬಂದಿ ಕೂಡಲೇ ನಕಲಿ ಕೀಯಿಂದ ರೂಮಿನ ಬಾಗಿಲು ತೆರೆದಿದ್ದಾರೆ. ಆಗ ಮಾಯಾ ಅವರ ಹತ್ಯೆಯಾಗಿರುವುದು ಕಂಡು ಬಂದಿದೆ.
ಅವರನ್ನು ಹಲವಾರು ಬಾರಿ ಇರಿದು ಕೊಲೆ ಮಾಡಲಾಗಿದೆ. ಕೂಡಲೇ ಹೋಟೆಲ್‌ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಹತ್ಯೆ ನಡೆದ ಸ್ಥಳದಿಂದ ಮಾಯಾ ಅವರ ಮೊಬೈಲ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಹತ್ಯೆ ಸೋಮವಾರ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅರ್ನವ್‌ ಈ ಕೊಲೆ ಮಾಡಿದ್ದಾನೆ. ಸೋಮವಾರ ಇಡೀ ರಾತ್ರಿ ಮಾಯಾ ಅವರ ಮೃತ ದೇಹದ ಜತೆ ಕಳೆದಿದ್ದಾನೆ. ಮಂಗಳವಾರ ಬೆಳಗ್ಗೆ ಅರ್ನವ್‌ ಹೋಟೆಲ್‌ ನಿಂದ ಹೊರಬಂದ ನಂತರ ಕ್ಯಾಬ್‌ ಹತ್ತಿರುವುದು ಸಮೀಪದ ಸಿಸಿಟಿವಿ ಗಳಿಂದ ಪತ್ತೆಯಾಗಿದೆ. ಈತನ ಮಾಹಿತಿ ಲಭ್ಯವಾಗಿದ್ದು ಕೂಡಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ನ.22 ರಿಂದ 24ರವರೆಗ ಇವರಿಬ್ಬರನ್ನು
ಹೊರತುಪಡಿಸಿ ಬೇರೆ ಯಾರೊಬ್ಬರೂ ಇವರ ಕೊಠಡಿಯನ್ನು ಪ್ರವೇಶಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article