ಉತ್ತರಾಖಂಡ ವಿಧಾನಸಭೆಯಲ್ಲಿ ಧ್ವನಿ ಮತದಾನದಿಂದ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕರಿಸಲಾಗಿದೆ.
ಕೇಂದ್ರ ಬಿಜೆಪಿ ಮಹತ್ವದ ಮಸೂದೆಯಾದ UCC ಅನ್ನು ಅನೇಕ ವಿರೋಧ ಪಕ್ಷಗಳು ವಿರೋಧದ ನಡುವೆಯೂ ಉತ್ತರಾಖಂಡ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಮಸೂದೆಯನ್ನು ಮಂಗಳವಾರ ಮಂಡಿಸಿತು ಇಂದು ಬುಧವಾರ ಅಂಗೀಕರಿಸಲಾಗಿದೆ.
ಸ್ವಾತಂತ್ರ್ಯದ ನಂತರ ಯಾವುದೇ ರಾಜ್ಯದಲ್ಲಿ ಇಂತಹ ಕ್ರಮವನ್ನು ಅನುಸರಿಸರಿರಲಿಲ್ಲ. ಇದೇ ಮೊದಲಬಾರಿಗೆ ಇಂತಹ ಒಂದು ಮಸೂದೆಯನ್ನು ರಾಜ್ಯವೊಂದು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಮಾಡಿದೆ.
ಎಲ್ಲಾ ನಾಗರಿಕರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರ ಕಾನೂನುಗಳನ್ನು ಸ್ಥಾಪಿಸುವ ಉದ್ದೇಶದಿಂದ ಇದನ್ನು ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹೇಳಿದ ಬಳಿಕ, ಇದಕ್ಕೆ ಧ್ವನಿಮತದ ಅಂಗೀಕಾರ ನೀಡಲಾಗಿದೆ.