ಬಜೆಟ್ ಮಂಡನೆಗೆ ಮುಂದಾದ ನಿರ್ಮಲಾ ಸೀತಾರಾಮನ್ ಅವರಿಗೆ ವಿರೋಧ ಪಕ್ಷಗಳ ವಿರೋಧ. ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಮನವಿ. ಗದ್ದಲದ ನಡುವೆಯೇ ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ.
ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಶೇ 100ರಷ್ಟು ಹೆಚ್ಚಳ; ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೂರು ನಾವಿನ್ಯತಾ ಸಂಸ್ಥೆಗಳ ಸ್ಥಾಪನೆ; 23 ಐಐಟಿಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳ; 60 ಸಾವಿರದಿಂದ 1.2 ಲಕ್ಷಕ್ಕೆ ಹೆಚ್ಚಳ.
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ರಾಷ್ಟ್ರೀಯ ತಯಾರಿಕಾ ವಲಯವನ್ನು ರಚನೆ; ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಾರಿ; ಸೌರ, ಇವಿ ಬ್ಯಾಟರಿ, ಮೋಟಾರ್ಗಳು ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಹೂಡಿಕೆಗೆ ಉತ್ತೇಜನ.
ಉದ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ಹೊಸ ಯೋಜನೆ ಜಾರಿ, 22 ಲಕ್ಷ ಉದ್ದಿಮೆದಾರರಿಗೆ ಅನುಕೂಲ; ಚರ್ಮೋದ್ಯವನ್ನು ಉತ್ತೇಜಿಸಿ ರಫ್ತು ಹೆಚ್ಚಿಸುವತ್ತ ಗಮನ, ಆ ಮೂಲಕ ಮೇಡ್ ಇನ್ ಇಂಡಿಯಾ ಬ್ರ್ಯಾಂಡ್ ಉತ್ತೇಜನೆ.
ಆತ್ಮನಿರ್ಭರ ಭಾರತ ಮೂಲಕ ಸ್ಟಾರ್ಟ್ಅಪ್ಗಳಿಗೆ ₹10ಕೋಟಿಯಿಂದ ₹20ಕೋಟಿವರೆಗೂ ಕಡಿಮೆ ಬಡ್ಡಿ ಸಾಲ. ಮೈಕ್ರೊ ಕಂಪನಿಗಳಿಗೆ ₹5 ಲಕ್ಷವರೆಗಿನ ಕ್ರೆಡಿಟ್ ಕಾರ್ಡ್ ವಿತರಣೆ ಹಾಗೂ ಇಂತಹ 10 ಲಕ್ಷ ಕಾರ್ಡ್ ಮೊದಲ ಹಂತದಲ್ಲಿ ಹಂಚಿಕೆ
₹60 ಸಾವಿರ ಕೋಟಿ ರಫ್ತು ವಹಿವಾಟು ಹೊಂದಿರುವ ಮೀನುಗಾರಿಕೆಯಲ್ಲಿ ಅಂಡಮಾನ್ ನಿಕೋಬಾರ್ ಹಾಗೂ ಲಕ್ಷ್ಯದ್ವೀಪಗಳನ್ನು ಗುರಿಯಾಗಿಸಿಕೊಂಡು ಒತ್ತು, ಇದಕ್ಕಾಗಿ ವಿಶೇಷ ವಲಯ ನಿರ್ಮಾಣ; ಪೌಷ್ಟಿಕತೆಯಲ್ಲಿ ಹೆಚ್ಚು ಬೇಡಿಕೆ ಇರುವ ತಾವರೆ ಬೀಜ (ಮಕಾನಾ) ಬೆಳೆಗೆ ಒತ್ತು.
ಮುಂದಿನ ಐದು ವರ್ಷಗಳ ಅಭಿವೃದ್ಧಿಯನ್ನು ಗಮದಲ್ಲಿಟ್ಟುಕೊಂಡು ಆರು ಅಂಶಗಳನ್ನು ಗಮದಲ್ಲಿಟ್ಟುಕೊಂಡು ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನಗಳಿಗೆ ಒತ್ತು.
ಯುವಜನತೆ, ದಲಿತರು, ಅನ್ನದಾತರು ಮತ್ತು ಮಹಿಳೆಯರನ್ನು ಉದ್ದೇಶವಾಗಿಟ್ಟುಕೊಂಡು ಬಜೆಟ್ ಮಂಡನೆ; ನಿರ್ಮಲಾ ಸೀತಾರಾಮನ್