ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೊರಗ ಸಂಘಗಳ ಒಕ್ಕೂಟ ಮನವಿ

 ಉಡುಪಿ: ವಿವಿಧ ಬೇಡಿಕೆಗಳನ್ನು ಈಡೀರಿಸುವಂತೆ ಆಗ್ರಹಿಸಿ ಜಿಲ್ಲೆಯ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗವು ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದೆ.

ಸಮುದಾಯದ ಪ್ರಮುಖ ಬೇಡಿಕೆಗಳಾದ ಕೃಷಿ ಯೋಗ್ಯ ಭೂಮಿ, ಯುವಕರಿಗೆ ಉದ್ಯೋಗ, ವೈದ್ಯಕೀಯ ವೆಚ್ಚ ಪಾವತಿ, ಪೌಷ್ಟಿಕ ಆಹಾರದ ಸಮರ್ಪಕ ಪೂರೈಕೆ ಮತ್ತು ಅಜಲು ಅಸ್ಪೃಶ್ಯತೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂತಾದ ಅನೇಕ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಕೊರಗ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸಮುದಾಯಗಳ ಬೇಡಿಕೆಗಳನ್ನು ಪೂರೈಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಅಧ್ಯಕ್ಷರಾದ ಸುಶೀಲ ನಾಡ, ಸಂಯೋಜಕರಾದ ಕೆ. ಪುತ್ರನ್ ಹೆಬ್ರಿ, ಬೊಗ್ರ ಕೊಕ್ಕರ್ಣೆ, ಶೀನ ಬೆಳ್ಮಣ್,  ನರಸಿಂಹ ಪೆರ್ಡೂರು, ಪ್ರೀತಿ ಹೆಬ್ರಿ, ಸುನೀತಾ ಶಿರ್ವ, ಪದ್ಮ ಪದವು, ಸುಪ್ರಿತ ಮುಂಡ್ಕೂರು, ಲಾವಣ್ಯ ಹೆಬ್ರಿ, ಪುಷ್ಪ ಹೆಬ್ರಿ, ಚಂದ್ರಾವತಿ ಹೆಬ್ರಿ, ವಾಸು ಮಣಿಪಾಲ, ನಿಖಿತಾ ಪೆರ್ಡೂರು, ಹರೀಶ ಬೆಳ್ಮಣ್ ಮತ್ತಿತರರು ಇದ್ದರು.

More articles

Latest article

Most read