ಕೋಲಾರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ದ್ವಿಚಕ್ರ ವಾಹನ ಕಳ್ಳತನ; ಪೊಲೀಸರು ಹೇಳಿದ್ದೇನು ಗೊತ್ತೇ?

Most read

ಕೋಲಾರ ನಗರದಲ್ಲಿ ದಿನೇದಿನೇ ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿದ್ದು ಸ್ಥಳೀಯರಿಗೆ ಇದು ತಲೆಬಿಸಿಯಾಗಿ ಪರಿಣಮಿಸಿದೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು ಬಿಗಿ ಕ್ರಮಕ್ಕೆ ನಗರದ ಪೊಲೀಸರು ಮುಂದಾಗಿದ್ದಾರೆ.

ಈ ಪ್ರಕರಣ ಸಂಬಂಧ ನಗರದಾದ್ಯಂತ ರಾತ್ರಿ ಮತ್ತು ಹಗಲೂ ಪೊಲೀಸು ಗಸ್ತುನ್ನು ಹೆಚ್ಚಿಸಲಾಗಿದೆ. ಈ ಕುರಿತು ಪೊಲೀಸು ಇಲಾಖೆ ಈಗಾಗಲೇ ಹೆಚ್ಚಿನ ಕ್ರಮಕ್ಕೆ ಮುಂದಾಗಿದೆ.

ನೂತನ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ರವರು ಈಗಾಗಲೇ ಹಗಲೂ ಹಾಗೂ ರಾತ್ರಿ ವೇಳೆಯಲ್ಲಿ ಹೆಚ್ಚಿನ ಪೊಲೀಸು ಗಸ್ತನ್ನು ನಿಯೋಜಿಸಿದೆ. ಈಗಾಗಲೇ ಕಳ್ಳತನ ವಾಗಿರುವ ಬೈಕ್ ಗಳ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಮೂಲಗಳ ಪ್ರಕಾರ ಈಗಾಗಲೇ ಒಂದಷ್ಟು ವಾಹನ ಕಳ್ಳರನ್ನು ಸೆರೆ ಹಿಡಿಯಲಾಗಿದ್ದು ಅವರಿಂದ ಒಂದಷ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

ಈ ಕುರಿತು ಮಾತನಾಡಿದ ರಕ್ಷಣಾಧಿಕಾರಿಗಳು ದ್ವಿಚಕ್ರ ವಾಹನಗಳ ಪತ್ತೆಗೆ ಹೆಚ್ಚಿನ ನಿಗಾ ವಹಿಸಲಾಗಿದೆಯೆಂದೂ ಸಾರ್ವಜನಿಕರು ಮನೆಯ ಹೊರಗೆ ವಾಹನ ನಿಲ್ಲಿಸುವವರು ಅದರಲ್ಲೂ ರಾತ್ರಿ ವೇಳೆ ವಾಹನ ನಿಲ್ಲಿಸುವವರು ವಾಹನ ಬೀಗ ಹಾಗೂ ಇನ್ನಿತರೆ ವಸ್ತುಗಳ ಭದ್ರತೆ ಬಗ್ಗೆ ನಿಗಾ ವಹಿಸುವಂತೆ ಮನವಿ ಮಾಡಿದ್ದಾರೆ.

More articles

Latest article