ಗುಜರಾತ್‌ ನ ಇಬ್ಬರು ಬಿಹಾರವನ್ನು ನಿಯಂತ್ರಿಸುತ್ತಿದ್ದಾರೆ, ಅವರಿಗೆ ಅವಕಾಶ ನೀಡಬೇಡಿ: ತೇಜಸ್ವಿ ಯಾದವ್ ಮನವಿ

Most read

ಪಟ್ನಾ: ಬಿಹಾರ ರಾಜ್ಯವನ್ನು ಗುಜರಾತ್‌ ನ ಇಬ್ಬರು ಬಿಹಾರವನ್ನು ನಿಯಂತ್ರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಗೆಲ್ಲಿಸಬೇಡಿ ಎಂದು ಆರ್‌ಜೆಡಿ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹೇಳಿದ್ದಾರೆ. ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಸ್ವಚ್ಛ ಆಡಳಿತ ನೀಡುವುದಾಗಿಯೂ ಅವರು ಭರವಸೆ ನೀಡಿದರು.

ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಯಾರ್‌ಪುರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿದರೂ ನಿತೀಶ್ ಕುಮಾರ್ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ. ಅವರನ್ನು ಬಿಜೆಪಿ ಹೈಜಾಕ್ ಮಾಡಿದ್ದು, ಹಾಗೂ ಗುಜರಾತ್‌ನ ಇಬ್ಬರು ಬಿಹಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ಹೇಳದೆ ಟೀಕಿಸಿದರು.

ಎನ್‌ ಡಿಎ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂದು ಶಾಸಕರು ತೀರ್ಮಾನ ಮಾಡುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಂದರೆ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ ಎಂದೇ ಅರ್ಥ. ಹಾಗಾಗಿ ಬಾಹರಿಗಳಾದ ಗುಜರಾತ್‌ ರಾಜ್ಯದವರನ್ನು ನಂಬಬೇಡಿ ಎಂದು ಹೇಳಿದರು.

ಬಿಹಾರ ಬಡತನ, ನಿರುದ್ಯೋಗ ಹಾಗೂ ಭ್ರಷ್ಟಾಚಾರದಿಂದ ತಾಂಡವವಾಡುತ್ತಿದೆ ಎಂದು ಅವರು ಹೇಳುವಾಗ ಓರ್ವ ಬಿಹಾರಿಯಾಗಿ ನನಗೆ ಕೋಪ ಉಕ್ಕಿ ಬರುತ್ತದೆ. ಕೇಂದ್ರದಲ್ಲಿ 11 ವರ್ಷ ರಾಜ್ಯದಲ್ಲಿ 20 ವರ್ಷ ಎನ್‌ಡಿಎ ಆಡಳಿತ ಇದ್ದರೂ ರಾಜ್ಯದ ಜನರ ತಲಾ ಆದಾಯ ಹಾಗೂ ರೈತರ ಆದಾಯ ಹೆಚ್ಚಳವಾಗಿಲ್ಲ ಎಂದು ಎನ್‌ ಡಿಎ ಸರ್ಕಾರವದ ವಿರುದ್ಧ ಹರಿಹಾಯ್ದರು.

More articles

Latest article