ರೂ.3,500 ಉಳಿಸಲು ಕೊಲೆ ಮಾಡಿದ ಆರೋಪಿಗಳ ಬಂಧನ

Most read

ಬೆಂಗಳೂರು: ಕೇವಲ 3,500 ರೂ. ಹಣ ಉಳಿಸುವ ಸಲುವಾಗಿ ಯುವಕನೊಬ್ಬನನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿ ಎಂಟು ಮಂದಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಹಮದ್‌ ಏಸನ್‌, ರೋಷನ್‌ ಜಮೀರ್‌, ಗಣೇಶ್‌, ನಂದಕುಮಾರ್‌, ನಾಗೇಶ್‌, ಮನುಕುಮಾರ್‌ ಹಾಗೂ 17 ವರ್ಷದ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಬಿಹಾರ ಮೂಲದ ಅಖಿಲೇಶ್‌ ಯಾದವ್‌ ಎಂಬಾತನನ್ನು ಕೊಲೆ ಮಾಡಿದ್ದರು. ಪ್ರಕರಣ
ನಡೆದ 40 ದಿನಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಅಕ್ಟೋಬರ್‌ 19ರಂದು ಕಾಚೋಹಳ್ಳಿಯಿಂದ  ಅಖಿಲೇಶ್‌ ನನ್ನು ಕಾರಿನಲ್ಲಿ ಅಪಹರಿಸಿದ್ದರು. ಆರೋಪಿಯೊಬ್ಬ ಅಖಿಲೇಶ್‌ ನಿಂದ 3,500
ರೂ. ಸಾಲ ಪಡೆದುಕೊಂಡಿದ್ದ. ಹಿಂತಿರುಗಿಸುವಂತೆ ಕೇಳಿದಾಗ ಪರಸ್ಪರ ಜಗಳ ನಡೆದಿದೆ. ನಂತರ ಆರೋಪಿಗಳು ಅಖಿಲೇಶ್‌ ನನ್ನು ಅಪಹರಿಸಿದ್ದಾರೆ. ಈತ ನೆಲಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ.
ಆರೋಪಿಗಳು ರಾಮಗೊಂಡನಹಳ್ಳಿಯ ಮನೆಯೊಂದರಲ್ಲಿ ಕೊಲೆ ಮಾಡಿ ವಿಜಯನಗರ ಜಿಲ್ಲೆಯ ಕೂಡ್ಲಿಗಿಗೆ ತೆರಳಿ  ಅಲ್ಲಿ ಅರಣ್ಯದಲ್ಲಿ ಬಿಸಾಡಿ ಬಂದಿದ್ದರು. ನಂತರ ಕುರಿಗಾಹಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗುರುತು ಪತ್ತೆಯಾಗದ ಕಾರಣ ಪೊಲೀಸರೇ ಅಕ್ಟೋಬರ್‌ 21ರಂದು ಅಂತ್ಯಸಂಸ್ಕಾರ ನಡೆಸಿದ್ದರು. ಈ ವೇಳೆಗೆ ದೇಹ ಕೊಳೆತು ಹೋಗಿತ್ತು.  ನಂತರ ಅಖಿಲೇಶ್‌ ಕುಟುಂಬದ ಸದಸ್ಯರು ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂತಿಮವಾಗಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಬಲಗೈನಲ್ಲಿದ್ದ ಟ್ಯಾಟೂ ನೋಡಿ ಕುಟುಂಬದವರು ಗುರುತು ಹಿಡಿದಿದ್ದರು.

More articles

Latest article