ಟೆಹ್ರಾನ್ : ಸದ್ಯದಲ್ಲೇ ಯುದ್ಧ ಕೊನೆಗೊಳ್ಳಲಿದೆ ಎಂಬ ಹೇಳಿಕೆ ನಂತರವೂ ಹಾರ್ಮೋಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳನ್ನು ನಿಲ್ಲಿಸಿದರೆ ಇರಾನ್ ಗೆ 20 ಪಟ್ಟು ಹೊಡೆತ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ವಿಶ್ವ ಮಾರುಕಟ್ಟೆಗಳಿಗೆ ತೈಲ ಮತ್ತು ಅನಿಲದ ಪ್ರಮುಖ ಪೂರೈಕೆ ಸ್ಥಗಿತಗೊಂಡಿದೆ. ಅಮೆರಿಕದಾದ್ಯಂತ ಇಂಧನ ಬೆಲೆ ಏರಿದೆ. ಈ ಯುದ್ಧವು ವಿದೇಶಿಯರು ವ್ಯಾಪಾರ ಕೇಂದ್ರಗಳಿಂದ ಪಲಾಯನ ಮಾಡುವಂತೆ ಮಾಡಿದೆ.
ಇರಾನ್, ಇಸ್ರೇಲ್ ಮತ್ತು ಬಹ್ರೇನ್, ಕುವೈತ್, ಯುಎಇ ಮತ್ತು ಸೌದಿ ಅರೇಬಿಯಾ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಆಸ್ತಿಗಳ ಮೇಲೆ ತನ್ನ ಪ್ರತಿದಾಳಿಯನ್ನು ಮುಂದುವರೆಸಿದೆ. ಇದರಿಂದ ಮನಾಮದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ, ಮಧ್ಯ ಇಸ್ರೇಲ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕಳೆದ ರಾತ್ರಿ ಟೆಹ್ರಾನ್ ನಲ್ಲಿ ಬಾಂಬ್ ದಾಳಿ ತೀವ್ರತೆ ಹೆಚ್ಚಾಗಿತ್ತು. ಅಲ್ಲಿನ ದಾಳಿಯಲ್ಲಿ ರಿಸಾಲತ್ ಚೌಕದ ಬಳಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಬಂದಿವೆ.
ಈ ನಡುವೆ, ಅಮೆರಿಕದ ಕ್ಷಿಪಣಿ ಕಾರ್ಯಕ್ರಮವನ್ನು ನಾಶಪಡಿಸಿದೆ ಎಂಬ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಹೇಳಿಕೆಯನ್ನು ಅಮೆರಿಕ ತಿರಸ್ಕರಿಸಿದೆ.
ಇರಾನ್ ವಿರುದ್ಧ ದಾಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪೋಟಕಗಳನ್ನು ನಿಯೋಜಿಸುತ್ತಿದೆ ಮತ್ತು 1 ಟನ್‌ಗಿಂತ ಹೆಚ್ಚು ತೂಕದ ಸಿಡಿತಲೆಗಳನ್ನು ಹೊಂದಿರುವುದಾಗಿ ಅಮೆರಿಕ ತಿಳಿಸಿದೆ.
ಮತ್ತೊಂದೆಡೆ, ಲೆಬನಾನ್‌ನಲ್ಲಿ ಇಸ್ರೇಲಿ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 486 ತಲುಪಿದೆ. ಇಸ್ರೇಲ್ ಮತ್ತು ಹಿಜ್ಬೊಲ್ಲಾ ಗುಂಡಿನ ದಾಳಿಯನ್ನು ಮುಂದುವರೆಸಿದೆ.
ಸೌದಿಯಲ್ಲಿ ಅರೇಬಿಯಾದಲ್ಲಿ ಹಾರಿ ಬಂದ ಡ್ರೋಣ್‌ಗಳು :
ದೇಶದ ಸೇನೆಯು ಅಲ್-ಖರ್ಜ್ ಗವರ್ನರೇಟ್‌ನ ಪೂರ್ವಕ್ಕೆ ಹಾರಿ ಬಂದ ಡ್ರೋನ್ ಅನ್ನು ತಡೆದು ನಾಶಪಡಿಸಲಾಗಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ದೇಶದ ಪೂರ್ವದ ಕಡೆಗೆ ಹಾರುತ್ತಿದ್ದ ಎರಡು ಡ್ರೋನ್‌ಗಳನ್ನು ತಡೆಹಿಡಿದ ಕೆಲವೇ ಗಂಟೆಗಳ ನಂತರ ಮತ್ತು ಅಲ್-ಖರ್ಜ್ ಗವರ್ನರೇಟ್ ಬಳಿ ಇನ್ನೂ ಎರಡು ಡ್ರೋನ್‌ಗಳನ್ನು ತಡೆಹಿಡಿಯಲಾಯಿತು.
ಇಸ್ರೇಲ್‌ನಲ್ಲಿ 2,339 ಜನರು ಆಸ್ಪತ್ರೆಗೆ ದಾಖಲು
ಇನ್ನು, ಇಸ್ರೇಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 191 ಜನರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ಹೇಳಿದೆ.
ಆಸ್ಪತ್ರೆಗೆ ದಾಖಲಾದವರಲ್ಲಿ ಸೈನಿಕರು ಮತ್ತು ನಾಗರಿಕರು ಸೇರಿದ್ದಾರೆ. ಯುದ್ಧ ಪ್ರಾರಂಭವಾದಾಗಿನಿಂದ 2,339 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿ 11 ಜನರು ಸೇರಿದಂತೆ ಸುಮಾರು 95 ಜನರು ಆಸ್ಪತ್ರೆಯಲ್ಲಿದ್ದಾರೆ.
ಈಜಿಪ್ಟ್ ನಲ್ಲಿ ಇಂಧನ ಬೆಲೆ ಶೇ.30 ರಷ್ಟು ಹೆಚ್ಚಳ
ಈಜಿಪ್ಟ್ ದೇಶೀಯ ಇಂಧನ ಬೆಲೆಗಳನ್ನು ಶೇಕಡಾ 30 ರಷ್ಟು ಹೆಚ್ಚಿಸಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಜಾಗತಿಕ ಇಂಧನ ಒತ್ತಡಗಳು ಹೆಚ್ಚಾಗಿದೆ. ಇದು ತೈಲ ಸರಬರಾಜು ಮತ್ತು ಹಡಗು ಮಾರ್ಗಗಳನ್ನು ಅಡ್ಡಿಪಡಿಸಿದೆ.
ಈಜಿಪ್ಟ್ ಪೆಟ್ರೋಲಿಯಂ ಸಚಿವಾಲಯ ಘೋಷಿಸಿದ ಹೆಚ್ಚಳವು ವಾಹನಗಳಲ್ಲಿ ಬಳಸುವ ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲಗಳಿಗೆ ಅನ್ವಯಿಸಿದೆ.

