Friday, January 16, 2026

ಡೊನಾಲ್ಡ್‌ ಟ್ರಂಪ್‌ ಗೆ ಕೊನೆಗೂ ಲಭ್ಯವಾದ ನೊಬೆಲ್ ಶಾಂತಿ ಪುರಸ್ಕಾರ: ಹೇಗೆ? ಇಲ್ಲಿದೆ ವಿವರ

Most read

ಶ್ವೇತಭವನ: ವೆನೆಜುವೆಲಾದ ಪ್ರತಿಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮಗೆ ಪ್ರದಾನ ಮಾಡಲಾದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ, ನಾರ್ವೇಜಿಯನ್ ನೊಬೆಲ್ ಸಂಸ್ಥೆಯು ಸ್ಪಷ್ಟನೆ ನೀಡಿದ್ದು, ನೋಬೆಲ್ ಶಾಂತಿ ಪ್ರಶಸ್ತಿಯನ್ನು ವರ್ಗಾಯಿಸುವ ಅಥವಾ ಇತರರೊಂದಿಗೆ ಹಂಚಿಕೊಳ್ಳುವ ಯಾವುದೇ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಚರ್ಚೆಗಳು ಮುಂದುವರೆದಿವೆ.

ಶ್ವೇತಭವನದಲ್ಲಿ ಮಚಾದೊ ಅವರು ಟ್ರಂಪ್ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ನೊಬಲ್‌ ಶಾಂತಿ ಪ್ರಶಸ್ತಿಯನ್ನು ಹಸ್ತಾಂತರಿಸಿದ್ದಾರೆ. ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ಶಾಂತಿಯುತ ಪರಿವರ್ತನೆಗೆ ಶ್ರಮಿಸಿದ್ದಕ್ಕಾಗಿ ತಮಗೆ 2025 ರಲ್ಲಿ ದೊರೆತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೊಟ್ಟಿದ್ದಾಗಿ ಆರಂಭದಲ್ಲಿ ಇದನ್ನು ಸ್ವೀಕರಿಸಿದ ಬಗ್ಗೆ ಯಾವುದೇ ಹೇಳಿಕೆ ನೀಡದ ಟ್ರಂಪ್‌ ನಂತರ

ತಮ್ಮದೇ ಒಡೆತನದ ʼಟ್ರೂತ್‌ʼ ಸಾಮಾಜಿಕ ಜಾಲತಾಣದಲ್ಲಿ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ನೀಡಿರುವ ಪ್ರಶಸ್ತಿಯನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.

ವೆನೆಜುವೆಲಾದ ವಿಪಕ್ಷ ನಾಯಕಿ ಮರಿಯಾ ಕೊರಿನಾ ಮಚಾದೊ ಅವರನ್ನು ಭೇಟಿಯಾದ ಕ್ಷಣಗಳು ಅವಿಸ್ಮರಣೀಯ. ಮಚಾದೊ ಅವರು ತಮ್ಮ ಹೋರಾಟದ ಉದ್ದಕ್ಕೂ ಅನೇಕ ಸಂಕಷ್ಟಗಳನ್ನು ಎದುರಿಸಿದ್ದಾರೆ. ಮರಿಯಾ ಅವರು ತಮಗೆ ಲಭ್ಯವಾದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶಾಂತಿ ಸ್ಥಾಪನೆಗಾಗಿ ನಾನು ಮಾಡಿದ ಕೆಲಸಗಳನ್ನು ಗುರುತಿಸಿ ನನಗೆ ಉಡುಗೊರೆಯಾಗಿ ನೀಡಿದ್ದಾರೆ. ಅದು ನನ್ನ ಪಾಲಿಗೆ ದೊಡ್ಡ ಗೌರವವಾಗಿತ್ತು. ಇಂತಹ ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಮಚಾದೊ ಅವರನ್ನು ಕೊಂಡಾಡಿದ್ದಾರೆ.

ಮಚಾದೊ ಏಕೆ ಈ ರೀತಿ ನಡೆದುಕೊಂಡರು ಎನ್ನುವುದು ತಿಳಿದು ಬಂದಿಲ್ಲ. ಆದರೆ ಟ್ರಂಪ್‌ ಮಾತ್ರ ಭಾರತ-ಪಾಕಿಸ್ತಾನ ಸೇರಿದಂತೆ ಹತ್ತಕ್ಕೂ ಹೆಚ್ಚು ಯುದ್ಧಗಳನ್ನು ನಿಲ್ಲಿಸಿದ್ದಕಾಗಿ ನನಗೆ ನೊಬಲ್‌ ಶಾಂತಿ ಪುರಸ್ಕಾರ ಲಭಿಸಬೇಕು ಎಂದು ಅನೇಕ ಬಾರಿ ಪ್ರತಿಪಾದಿಸಿದ್ದರು.

More articles

Latest article