ಲವ್‌ ಮಾಡುವಂತೆ ಕಿರುಕುಳ; ಬಾಲಕಿ ಆತ್ಮಹತ್ಯೆ

Most read

ವಿಜಯಪುರ:ಯುವಕನೊಬ್ಬ ಪದೇ ಪದೇ ಚುಡಾಯಿಸುತ್ತಿ ಎಂಬ ಕಾರಣಕ್ಕೆ ಮನನೊಂದು ಅಪ್ರಾಪ್ತ ಬಾಲಕಿಯೊಬ್ಬಳು ನೇಣಿಗೆ ಶರಣಾದ ಘಟನೆ ಜಿಲ್ಲೆ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ಸಂಗಮೇಶ ಜುಂಜವಾರ ಎಂಬಾತ ಈ ಬಾಲಕಿಯನ್ನು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ. ಪ್ರೀತಿಯ ಹೆಸರಿನಲ್ಲಿ ಬಾಲಕಿಯನ್ನು ಚುಡಾಯಿಸುತ್ತಿದ್ದ ಮತ್ತು ಕುರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜಿಗೆ ಹೋಗಿ ಬರುತ್ತಿದ್ದಾಗ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಜುಂಜವಾರ ಕೀಟಲೆ ಮಾಡುತ್ತಿದ್ದ. ಇತ್ತೀಚೆಗೆ ಬಾಲಕಿಯ ಮೈ ಮುಟ್ಟಿ ಮಾತನಾಡಿಸುತ್ತಿದ್ದ ಯುವಕ ನಿನ್ನನ್ನೇ ಪ್ರೀತಿಸುವೆ, ನೀನೂ ನನ್ನನ್ನು ಪ್ರೀತಿಸಬೇಕು ಎಂದು ಬಲವಂತ ಮಾಡುತ್ತಿದ್ದ. ಇದನ್ನು ಪ್ರಶ್ನೆ ಮಾಡಿದ್ದ ಬಾಲಕಿಯ ಸಹೋದನಿಗೆ ಸಂಗಮೇಶ ಜೀವ ಬೆದರಿಕೆ ಹಾಕಿದದ ಎಂದೂ ತಿಳಿದು ಬಂದಿದೆ. ಮುದ್ದೇಬಿಹಾಳ ಪೊಲೀಸರು  ಸಂಗಮೇಶನ ಮೇಲೆ ಪೋಕ್ಸೋ  ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

More articles

Latest article