ಶಿವಮೊಗ್ಗ: ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಆರಂಭದಿಂದಲೇ ಮುಂಜಾಗೃತಿ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಕೆ.ಎಫ್.ಡಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು, ತಲವಾಟ, ಹಿರೇಮನೆ ಸೇರಿದಂತೆ, ಶರಾವತಿ ಕಣಿವೆಯ ಅಂಚಿನ ಗ್ರಾಮಗಳಾದ ಭೇಟಿ ನೀಡಿದ ಸಚಿವರು, ಗ್ರಾಮಸ್ಥರ ಅಹವಾಲುಗಳನ್ನ ಸ್ವೀಕರಿಸಿದರು.
ಮಂಗನ ಕಾಯಿಲೆ ಕುರಿತಂತೆ ಗ್ರಾಮಸ್ಥರು ಈಗಿನಿಂದಲೇ ಹೆಚ್ಚಿನ ಜಾಗೃತಿ ವಹಿಸುವಂತೆ ಕರೆ ನೀಡಿದ ಸಚಿವರು, ಸರ್ಕಾರದಿಂದ ಅಗತ್ಯ ಆರೋಗ್ಯ ಸೇವೆ ಒದಗಿಸಲಾಗುವುದು.
2026 ಕ್ಕೆ ಕೆಎಫ್.ಡಿ ಗೆ ಲಸಿಕೆ ದೊರೆಯುವ ನಿರೀಕ್ಷೆಯಿದೆ. ಲಸಿಕೆ ಒದಗಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಐಸಿಎಂಆರ್ ಜೊತೆ ಮಾತುಕತೆ ನಡೆಸಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಲಸಿಕೆ ಒದಗಿಸಲು ಮನವಿ ಮಾಡಲಾಗಿದೆ. ಅಲ್ಲಿಯ ವರೆಗು ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಮಂಗನ ಕಾಯಿಲೆಯಿಂದ ಯಾವುದೇ ಒಂದು ಸಾವುಗಳಾಗಬಾರದು. ಮಂಗನ ಕಾಯಲೆ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಮುಂಜಾಗೃತಿ ವಹಿಸಿದರೆ ಸಾವುಗಳನ್ನ ತಡೆಯಬಹುದು. ಗ್ರಾಮಗಳಲ್ಲಿ ಜನರಿಗೆ ಮಂಗನ ಕಾಯಿಲೆ ಹರಡುವ ಕುರಿತಂತೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಗಳನ್ನ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಸಿದ್ದಾಪುರ ಹಾಗೂ ಸಾಗರ ತಾಲೂಕಿನ ಮಂಗನ ಕಾಯಿಲೆ ಕಳೆದ ವರ್ಷ ಹೆಚ್ಚು ಕಾಣಿಸಿಕೊಂಡಿತ್ತು. ಈ ಬಾರಿ ಮುಂಚಿತವಾಗಿಯೇ ಜಾಗೃತಿ ವಹಿಸಲಾಗುತ್ತಿದೆ ಎಂದರು.
ಕೆಎಫ್.ಡಿ ಪೀಡಿತ ಪ್ರದೇಶಗಳಿಗಾಗಿಯೇ ಪ್ರತ್ಯೇಕ ಸಂಚಾರಿ ಮೊಬೈಲ್ ಕ್ಲಿನಿಕ್ ನೀಡುವುದಾಗಿ ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗ್ರಾಮಸ್ಥರಿಗೆ ಭರವಸೆ ನೀಡಿದರು. ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ವಿನ ಸೌಲಭ್ಯ ಒದಗಿಸಿಕೊಡುವುದರ ಜೊತೆಗೆ, ವೈದ್ಯರಿಗೆ ಸ್ಥಳೀಯ ಮಟ್ಟದಲ್ಲಿ ಉಳಿದುಕೊಳ್ಳಲು ಮೂಲಸೌಕರ್ಯಗಳನ್ನ ಕಲ್ಪಿಸಲಾಗುವುದು. ಬೇಸಿಗೆ ಸಂದರ್ಭದಲ್ಲಿ ಕಾಡಿ ಹೋಗುವ ಜನರು ಹೆಚ್ವು ಎಚ್ಚರಿಕೆ ವಹಿಸಬೇಕು. DEPA ತೈಲವನ್ನ ಲೇಪಿಸಿಕೊಳ್ಳುಂತಹ ಕ್ರಮಗಳನ್ನ ಕೈಗೊಳ್ಳಬೇಕು. ಅಗತ್ಯ ಔಷಧಿಗಳ ಕೊರತೆಯಾಗದಂತೆ ಇಲಾಖೆ ವಿಶೇಷ ಗಮನ ಹರಿಸಲಿದೆ. ಗ್ರಾಮಸ್ಥರು ಕೂಡ ಮಂಗಳು ಸಾವಿನ ಸುದ್ದಿ ತಿಳಿದಾಗ ತಕ್ಷಣ ಗ್ರಾಮಸ್ಥರು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದು ಮುಂಜಾಗೃತೆ ವಹಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.