ಮೈಕ್ರೋ ಫೈನಾನ್ಸ್ ಕಿರುಕುಳ ನಿಯಂತ್ರಣಕ್ಕೆ  ಸುಗ್ರೀವಾಜ್ಞೆ ಖಚಿತ; ಸಚಿವ ಪರಮೇಶ್ವರ್‌

Most read

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಹದ್ದುಬಸ್ತಿನಲ್ಲಿಡಲು ಸುಗ್ರೀವಾಜ್ಞೆ ತರುವ ಸಂಬಂಧ ನಾಳೆ ನಡೆಯಲಿರುವ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧರಿಸಲಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಸುಗ್ರೀವಾಜ್ಞೆ ತರಲು ತರಲು ನಿರ್ಧರಿಸಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಸುಗ್ರೀವಾಜ್ಞೆ ಕುರಿತು ರೂಪುರೇಷೆ ಕುರಿತು ನಿರ್ಧರಿಸಲು ಇಂದು ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ಕರೆಯಲಾಗಿದೆ.  ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚನೆ ಹೋಗಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳು ನೀಡುವ ಕಿರುಕುಳವನ್ನು ನಿಯಂತ್ರಿಸುತ್ತೇವೆ. ಡಿಸಿಪಿಗಳಿಗೆ ಹೆಚ್ಚಿನ ಅಧಿಕಾರ ನೀಡಲು ಚಿಂತನೆ ನಡೆಸಿದ್ದೇವೆ ಎಂದರು.

ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಿಯನ್ನು ಔಟ್ ಸೋರ್ಸ್ ಮಾಡಿದ್ದಾರೆ. ವಸೂಲಿಗಾರರು ಗೂಂಡಾಗಳ ರೀತಿ ವರ್ತಿಸುತ್ತಿದ್ದಾರೆ. ಇಂದು ಕಾನೂನು,  ಕಂದಾಯ ಸಚಿವರು ಹಾಗೂ ನಾನು ಮೂವರೂ ಸಚಿವರು ಸೇರಿ ಕರಡನ್ನು ಅಂತಿಮಗೊಳಿಸುತ್ತೇವೆ. ನಾಳೆಯೇ ಕ್ಯಾಬಿನೆಟ್ ಗೆ ತಂದು ಸುಗ್ರೀವಾಜ್ಞೆಗೆ ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತೇವೆ ಎಂದರು.

More articles

Latest article