ನವದೆಹಲಿ: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಒಂದೇ ಕುಟುಂಬದ ಮೂವರನ್ನು ಚೂರಿಯಿಂದ ಹತ್ಯೆ ಮಾಡಿರುವ ಭೀಕರ ಘಟನೆ ಇಂದು ನಡೆದಿದೆ. ದೆಹಲಿಯ ನೆಬ್ ಸರಾಯ್ ಎಂಬಲ್ಲಿ ದಂಪತಿ ಹಾಗೂ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತರನ್ನು ರಾಜೇಶ್ (53), ಅವರ ಪತ್ನಿ ಕೋಮಲ್ (47) ಮತ್ತು ಅವರ 23 ವರ್ಷದ ಮಗಳು ಕವಿತಾ ಎಂದು ಗುರುತಿಸಲಾಗಿದೆ. ಆದರೆ ಮಗ ಬೆಳಗ್ಗೆ ಜಾಗಿಂಗ್ಗೆ ಹೋಗಿದ್ದ ಕಾರಣ ಅದೃಷ್ಟವಶಾತ್ ಉಳಿದಿದ್ದಾನೆ. . ಇಂದು ರಾಜೇಶ್ ದಂಪತಿಗಳು ವಾರ್ಷಿಕತ್ಸವ ಆಚರಿಸಿಕೊಳ್ಳುವವರಿದ್ದರು.
ಜಾಗಿಂಗ್ಗೆಂದು ಬೆಳಗ್ಗೆ ಹೋಗಿದ್ದ ಮನೆಗೆ ಹಿಂದಿರುಗಿದಾಗ ಪೋಷಕರು ಮತ್ತು ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ವಸ್ತು ಕಳುವಾಗಿಲ್ಲ ಎಂಬುದು ತಿಳಿದುಬಂದಿದೆ. ದೆಹಲಿಯ ನಿವಾಸಿಗಳಿಗೆ ಭದ್ರತೆ ಒದಗಿಸುವಲ್ಲಿ ಆಪ್ ಸರ್ಕಾರ ವಿಫಲವಾಗಿದೆ ಎಂದೂ ಆತ ಆರೋಪಿಸಿದ್ದಾನೆ. ದೆಹಲಿಯಲ್ಲಿ ಹಗಲು ದರೋಡೆ, ಕೊಲೆ, ಮಾದಕವಸ್ತುಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಭದ್ರತೆ ಒದಗಿಸುವಲ್ಲಿ ಸರ್ಕಾರ ಸೋತಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಆಪ್ ಸರ್ಕಾರ ಹೇಳಿದೆ.

