ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಬಗ್ಗೆ ಎಲ್ಲೆಲ್ಲೂ ಸುದ್ದಿ ಹರಿದಾಡುತ್ತಿದೆ. ಆ ಬಗ್ಗೆ ಈಗ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ವಿಚಾರ, ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ನೀವು ನಮ್ಮನ್ನು ಕೇಳಬೇಡಿ, ಬಿಜೆಪಿ ನಾಯಕರನ್ನ ಕೇಳಬೇಕು. ಶೋಭಕ್ಕನಿಗೆ, ಯಡಿಯೂರಪ್ಪರಿಗೆ, ವಿಜಯೇಂದ್ರನಿಗೆ, ಕುಮಾರಣ್ಣನಿಗೆ ಕೇಳಬೇಕು. ನಮಗೆ ಕೇಳಿದರೆ ನಾವೇನು ಹೇಳಬೇಕು. ಯಾಕೆ ಅವರು ಬಾಯಿ ಬಿಡ್ತಾಯಿಲ್ಲ, ಎಲ್ಲೆಲ್ಲೋ ಬಾಯಿ ಬಿಡ್ತಾರೆ, ಎಲ್ಲೆಲ್ಲೋ ಟ್ವೀಟ್ ಮಾಡ್ತಾರೆ. ಇದು ಆಡಿನರಿ ಮನುಷ್ಯನದ್ದಾ…? ದೇಶದ ಒಬ್ಬ ಸಂಸತ್ ಸದಸ್ಯನ ವಿಚಾರವಿದು. ಒಬ್ಬ ಶಾಸಕರ ವಿಚಾರ ಮಾಜಿ ಮಂತ್ರಿಗಳ ವಿಚಾರ ಅವರು ಉತ್ತರ ಕೊಡಬೇಕು ನಾವೇನು ಉತ್ತರ ಕೊಡಬೇಕು ಇದಕ್ಕೆ. ರಾಜ್ಯ ತಲೆತಗ್ಗಿಸುವಂತೆ ಆಗಿದೆ ದೆಹಲಿಯಿಂದ ಎಷ್ಟು ಕರೆ ಬರ್ತಾ ಇದ್ದಾವೆ ಗೊತ್ತಾ..? ಬಿಜೆಪಿಯವರು ಉತ್ತರ ಕೊಡಬೇಕು ಇದಕ್ಕೆ. ಅದೇನು ಮಾಡುತ್ತಾರೋ ಮೊದಲು ಹೇಳಲಿ ಅವರು ಎಂದಿದ್ದಾರೆ.
ಕಾಂಗ್ರೆಸ್ ಮುಖಂಡ ಮನೋಹರ್ ಮಾತನಾಡಿ, ದೇಶದಲ್ಲಿ ಅತ್ಯಂತ ದೊಡ್ಡ ಕಾಮುಕ ಪ್ರಜ್ವಲ್ ರೇವಣ್ಣ. ಮುಗ್ದರನ್ನ ಅತ್ಯಾಚಾರ ಮಾಡಿ ಅವರ ವಿಡಿಯೋ ಮಾಡಿಕೊಂಡಿದ್ದಾನೆ. ಮಹಿಳೆಯರ ರಕ್ಷಣೆ ಮಾಡುತ್ತೇವೆ ಅಂದ ದೇವೇಗೌಡರು ಕುಟುಂಬ ಇವತ್ತು ಇದೆಯಾ? ಬಿಜೆಪಿ ಇಂತಹವರ ಜೊತೆ ದೋಸ್ತಿ ಮಾಡಿದೆ ನಾಚಿಕೆ ಆಗಬೇಕು. ದೇವೇಗೌಡರು ಮುಂದೆ ಬಂದು ಪ್ರಜ್ವಲ್ ರೇವಣ್ಣರನ್ನ ಗಲ್ಲಿಗೆ ಹಾಕಿ ಅಂತ ಬಹಿರಂಗವಾಗಿ ಹೇಳಬೇಕು. ಬಿಜೆಪಿಯಲ್ಲಿ ಯಾರು ಹೆಣ್ಣು ಮಕ್ಕಳು ಇಲ್ಲವಾ. ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ. ಯಾರು ಮಾತಾಡ್ತಿಲ್ಲ. ಶೋಭಾ ಕರಂದ್ಲಾಜೆ ಎಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಇರೋ ಇಲಾಖೆಗೆಗಳು ಸ್ವಯಂ ಪ್ರೇರಿತವಾಗಿ ದೂರು ಹಾಕಬೇಕು. ಪ್ರಜ್ವಲ್ ರೇವಣ್ಣರನ್ನ ವಿದೇಶಕ್ಕೆ ಕಳಿಸಿರೋದು ಮೋದಿ ಅವರು. ಮೋದಿ ಬೇಟಿ ಬಚಾವೋ.. ಬೇಟಿ ಪಡಾವೋ ಅಂತೀರಾ. ಮಹಿಳೆಯರ ವಿರೋಧ ಪಕ್ಷ ಬಿಜೆಪಿ, ಜೆಡಿಎಸ್ ಎಂದು ಕಿಡಿಕಾರಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಇದು ದೇಶದ ಇತಿಹಾಸದಲ್ಲೇ ದೊಡ್ಡ ಲೈಂಗಿಕ ಹಗರಣ. ನೂರಕ್ಕೂ ಹೆಚ್ಚು ಮಕ್ಕಳನ್ನು ಅತ್ಯಾಚಾರ ಮಾಡಿರೋದು ಖಂಡನೀಯ. ಮಾಜಿ ಪ್ರಧಾನಿಗಳ ಮೊಮ್ಮಗ ಈ ರೀತಿ ಮಾಡಿರೋದು ದೊಡ್ಡ ತಪ್ಪು. ಇಷ್ಟೆಲ್ಲ ಮಗ ಮಾಡಿದ್ರೂ ಅವರಿಗೆ ಗೊತ್ತೇ ಇಲ್ವಾ? ಅಥವಾ ಗೊತ್ತಿದ್ರೂ ಈ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ರಾ? ಅವರ ತಾಯಿ, ತಂದೆ ಇದಕ್ಕೆಲ್ಲ ಉತ್ತರ ಕೊಡ್ಬೇಕು. ಅವರ ಕುಟುಂಬಕ್ಕೆ ಅಧಿಕಾರ ಇದ್ದರೆ ಸಾಕು. ಅಪ್ಪನಿಗೆ PWD ಇಲಾಖೆಯೇ ಬೇಕು, ಅಧಿಕಾರ ದಾಹ. ಚಿಕ್ಕಪ್ಪ, ಮಗ, ಅತ್ತೆ, ಸೊಸೆ ಎಲ್ಲರಿಗೂ ಅಧಿಕಾರ ಬೇಕು. ಸಿಬಿಐ ಏನು ಮಾಡ್ತಾ ಇತ್ತು? ಸುಮೋಟೊ ಕೇಸ್ ದಾಖಲಿಸಿಕೊಳ್ಳಬೇಕಿತ್ತು. ಕೂಡಲೇ ಈ ಬಗ್ಗೆ ತನಿಖೆ ಆಗ್ಬೇಕು, ನಾವು ಉನ್ನತ ಮಟ್ಟದ ತನಿಖೆಗೆ ನೀಡ್ತೇವೆ ಎಂದಿದ್ದಾರೆ.
ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಅಂತ ಕುಮಾರಸ್ವಾಮಿ ಹೇಳ್ತಾರೆ. ಈಗ ದಾರಿ ತಪ್ಪಿದ್ದು ಯಾರು? ಅವರ ಮನೆಯ ಮಗನೇ ದಾರಿ ತಪ್ಪಿದ್ದಾನೆ. ಎಷ್ಟು ಮಾಂಗಲ್ಯ ಕೀಳುತ್ತಾರೆ ಅಂತ ಮೋದಿ ಹೇಳ್ತಾರೆ. ಈ ಬಗ್ಗೆ ಪ್ರಧಾನಿ ಮೋದಿ ಉತ್ತರ ಕೊಡ್ಬೇಕು. ಪ್ರಜ್ವಲ್ ರೇವಣ್ಣ ಎಷ್ಟು ಮಹಿಳೆಯರ ತಾಳಿ ಕಿತ್ತಿದ್ದಾರೆ? ಇವತ್ತು ರಾಜ್ಯಕ್ಕೆ ಮೋದಿ ಬರ್ತಿದ್ದಾರೆ. ಎಷ್ಟು ಜನರ ತಾಳಿ ಕಸಿದಿದ್ದಾರೆ ಅಂತ ಅವರೇ ಹೇಳ್ಬೇಕು ಎಂದು ಮೋದಿ ವಿರುದ್ಧವೂ ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.