1974ರಲ್ಲಿ ರಿಲೀಸ್ ಆದ ಸಂಪತ್ತಿಗೆ ಸವಾಲ್ ಸಿನಿಮಾ ಇಂದಿಗೂ ಎವರ್ ಗ್ರೀನ್. ಅದರಲ್ಲೂ ಮಂಜುಳಾ, ಹಾಗೂ ರಾಜ್‍ಕುಮಾರ್ ಅವರ ಸವಾಲಿನ ಮಾತುಗಳು, ಕಿಚ್ಚೆಬ್ಬಿಸುವ ಕೋಪ ತಾಪ ಎಲ್ಲವೂ ಈಗಿನ ಜನರೇಷನ್ ಮಕ್ಕಳಿಗೂ ಇಷ್ಟವಾಗುವಂತ ಸಿನಿಮಾ. ಇಂದಿಗೆ ಸಿನಿಮಾ 50 ವರ್ಷ ಪೂರೈಸಿದೆ. ಸಾಹುಕಾರ ನಾಟಕ ಆಧರಿಸಿ ಸಿನಿಮಾ ಮಾಡಲಾಗಿತ್ತು. ಸಾಹುಕಾರನ ಪಾತ್ರದಲ್ಲಿ ವಜ್ರಮುನಿ ಅಭಿನಯಿಸಿದ್ದರು. ಅಲ್ಲಿಂದ ವಜ್ರಮುನಿ ಅವರಿಗೂ ಲಕ್ ಬದಲಾಗಿತ್ತು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸಿಗುವುದಕ್ಕೆ ಶುರುವಾಗಿತ್ತು.
ಕನ್ನಡಿಗರ ಮನ ಗೆದ್ದಿದ್ದ ಸಂಪತ್ತಿಗೆ ಸವಾಲ್ ಆ ಕಾಲದಲ್ಲಿಯೇ ತಮಿಳು, ಮಲಯಾಳಂ ಭಾಷೆಗಳಿಗೆ ರಿಮೇಕ್ ಆಗಿತ್ತು. ಎಲ್ಲೆಡೆ ಅದ್ಭುತ ಪ್ರದರ್ಶನ ಕಂಡಿತು. ಈ ಸಿನಿಮಾದ ನಿರ್ಮಾಪಕರೇ ಹಾಡಿ ಹೊಗಳಿದ್ದರು. ರಾಜ್‍ಕುಮಾರ್ ಅವರೇ ಈ ಸಿನಿಮಾ ಅದ್ಭುತ ಪ್ರದರ್ಶನ ಕಂಡಿದೆ. ನನಗೆ ಬಹಳ ದುಡ್ಡು ಬಂದಿದೆ ಎಂದುಕೊಳ್ಳಬೇಡಿ. ನಿಮಗೆ ಒಳ್ಳೆಯ ಹೆಸರು ಬರಲೆಂದು ಈ ಸಂಭ್ರಮಾಚರಣೆ ಮಾಡುತ್ತಿದ್ದೇನೆ ಎಂದಿದ್ದರಂತೆ. ಇದು ಅಣ್ಣಾವ್ರಿಗೆ ಬೇಸರ ತರಿಸಿದ್ದಲ್ಲದೆ, ಆಶ್ಚರ್ಯವನ್ನುಂಟು ಮಾಡಿತ್ತಂತೆ. ರಾಜ್ಯಾದೆಲ್ಲೆಡೆ ಇಷ್ಟೊಳ್ಳೆ ಪ್ರದರ್ಶನ ಕಾಣುತ್ತಿದೆ. ಹಣ ಬಂದಿಲ್ವಾ. ಹಾಗಾದ್ರೆ ಬೇರೆ ಸಿನಿಮಾಗಳ ಕಥೆ ಹೇಗೆ ಎಂದು ಪಾರ್ವತಮ್ಮ ಬಳಿ ಚರ್ಚೆ ನಡೆಸಿದ್ದರಂತೆ.
ಆದರೆ ಪಾರ್ವತಮ್ಮ ಅವರಿಗೆ ಈ ವಿಚಾರ ಕೇಳಿ ಬೇಸರವಾಗಿತ್ತಂತೆ. ಹಾಗಂತ ಸುಮ್ಮನೆ ಕೂರದೆ ರಾಜ್ಯದೆಲ್ಲೆಡೆ ಸಂಪತ್ತಿಗೆ ಸವಾಲ್ ಸಿನಿಮಾದ ಕಲೆಕ್ಷನ್ ತರಿಸಿದ್ದರಂತೆ. ಆದರೆ ಸತ್ಯದ ಅರಿವಾದ ಮೇಲೆ ನಮ್ಮ ಸಿನಿಮಾಗಳ ಲಾಭ ನಷ್ಟ ನಮಗೆ ಇರಲಿ. ಬೇರೆ ನಿರ್ಮಾಪಕರಿಗೆ ನಷ್ಟವಾಗುವುದು ಬೇಡ ಎಂದು ಅಂದು ನಿರ್ಮಾಣದ ಸಂಸ್ಥೆ ಹುಟ್ಟು ಹಾಕಿದ್ದರಂತೆ. ಮೊದಲಿಗೆ ತ್ರಿಮೂರ್ತಿ ಸಿನಿಮಾವನ್ನು ತಮ್ಮದೇ ಬ್ಯಾನರ್ ನಲ್ಲಿ ಮಾಡಿದರು. ಬಳಿಕ ಅಣ್ಣಾವ್ರು ಬೇರೆ ಬ್ಯಾನರ್ ನಲ್ಲಿ ನಟಿಸುವುದು ಕಡಿಮೆಯಾಗಿತ್ತು.