ರಾಜ್ಯದ ಮಲೆನಾಡು ಮಹಾಮಳೆಗೆ ತತ್ತರ, ಜನಜೀವನ ಅಸ್ತವ್ಯಸ್ತ

Most read

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತವಾಗಿದೆ.

ಗುಡ್ಡ ಕುಸಿತ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಗುಡ್ಡ ಕುಸಿದ ರಭಸಕ್ಕೆ ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದೆ.

ಅಗ್ನಿಶಾಮಕ, NDRF ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗುಡ್ಡದ ಮಣ್ಣಿನಡಿ 9 ಜನ ಸಿಲುಕಿರೋ ಶಂಕೆ ವ್ಯಕ್ತವಾಗುತ್ತಿದೆ. ಒಂದೇ ಕುಟುಂಬದ ಲಕ್ಷ್ಮಣ್ ನಾಯ್ಕ (47), ಶಾಂತಿ (36), ರೋಶನ್ (11), ಅವಂತಿಕಾ (6), ಜಗನ್ನಾಥ (55) ಮಣ್ಣಿನಡಿ ಸಿಲುಕಿರುವ ಶಂಕೆ.

ಮಾಲತಿ ನದಿ ಉಕ್ಕಿ ಹರಿದು ಬಿದರಗೋಡು ಸಂಚಾರ ಬಂದ್

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಸಮೀಪ ಮಾಲತಿ ನದಿ ಉಕ್ಕಿ ಹರಿಯುತ್ತಿದ್ದು ಗುಡ್ಡಕೇರಿಯಿಂದ ಹೊನ್ನೆತಾಳು ಮಾರ್ಗವಾಗಿ ಬಿದರಗೋಡು ಸಂಪರ್ಕಿಸುವ ರಸ್ತೆ ಸಂಪೂರ್ಣ ಬಂದ್ ಆಗಿರುತ್ತದೆ.

ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಆಗುಂಬೆ – ಬಿದರಗೋಡು ಮಾರ್ಗದಲ್ಲಿ ಸಂಚಾರಕ್ಕೆ ಮನವಿ ಮಾಡಲಾಗಿದೆ.

ಕಬಿನಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇಗುಲದ ಸ್ನಾನಘಟ್ಟ ಮುಳುಗಡೆಯಾಗಿರುತ್ತದೆ.

ಈ ಸಂಬಂಧ ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ದೇಗುಲ ಸಿಬ್ಬಂದಿ ಸೂಚನೆ ನೀಡಿರುತ್ತಾರೆ. ನಂಜನಗೂಡಿನ 16 ಕಾಲು ಮಂಟಪ ಅರ್ಧದಷ್ಟು ಮುಳುಗಡೆಯಾಗಿರುತ್ತದೆ.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿ

ಚಿಕ್ಕಮಗಳೂರಲ್ಲಿ ನಿಲ್ಲದ ಪುನರ್ವಸು ಮಳೆ ಅಬ್ಬರ. ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿಯ ಗಾಂಧಿ ಮೈದಾನ ಹಾಗೂ ಯಾತ್ರಿ ನಿವಾಸದವರೆಗೂ ನುಗ್ಗಿದ ನದಿ ನೀರು. ನದಿ ಪಕ್ಕದ ಪ್ಯಾರಲ್ ರಸ್ತೆಯೂ ಸಹ ಮುಳುಗಡೆಯಾಗಿದೆ.

ಗುಡ್ಡ ಕುಸಿದು ಕೊಯನಾಡು ಶಾಲಾ ಕಟ್ಟಡ ಸಂಪೂರ್ಣ ಜಖಂ

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ. ಕೊಯನಾಡು ಶಾಲೆ ಹಿಂಭಾಗದಲ್ಲಿ ಗುಡ್ಡ ಕುಸಿದು ಶಾಲಾ ಕಟ್ಟಡ ಸಂಪೂರ್ಣ ಜಖಂಗೊಂಡಿರುತ್ತದೆ. ಮಳೆ ಹಿನ್ನೆಲೆ ಶಾಲೆಗೆ ಜಿಲ್ಲಾಡಳಿತ ರಜೆ ಘೋಷಣೆ. ಶಾಲೆಗೆ ರಜೆ ಇದ್ದ ಹಿನ್ನೆಲೆ ತಪ್ಪಿದ ಭಾರೀ ಅನಾಹುತ.

ಕುಂದಾಪುರದ ವಾರಾಹಿ ಸೌಪರ್ಣಿಕ ನದಿ ಭರ್ತಿ

ಕುಂದಾಪುರದ ವಾರಾಹಿ ಸೌಪರ್ಣಿಕ ನದಿ ತುಂಬಿ ಹರಿಯುತ್ತಿದ್ದು, ಬೇಳೂರು ದೇಲಟ್ಟು ಭಾಗದಲ್ಲಿನ ಜನರ ಸ್ಥಳಾಂತರ ಮಾಡಲಾಗಿದೆ. ಕುಂದಾಪುರ ಅಗ್ನಿಶಾಮಕ ದಳ ಕಾರ್ಯಾಚರಣೆ ಮುಂದುವರಿದಿದೆ.

More articles

Latest article