ಕೊಡಗು ಬಾಲಕಿಯ ರುಂ*ಡ ಕೊನೆಗೂ ಪತ್ತೆ

ಸೋಮವಾರಪೇಟೆ (ಕೊಡಗು): ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ಭೀಕರ ಹತ್ಯೆಯ ನಂತರ ಕೊನೆಗೂ ಆಕೆಯ ರುಂಡ ಪತ್ತೆಯಾಗಿದೆ.

ಮದುವೆ ರದ್ದಾದ ಹಿನ್ನೆಲೆಯಲ್ಲಿ ಆರೋಪಿ ಪ್ರಕಾಶ್ ಬಾಲಕಿ ಮೀನಾಳ ರುಂಡ ಮುಂಡ ಬೇರೆ ಮಾಡಿ ಕೊಂದುಹಾಕಿದ್ದ. ರುಂಡವನ್ನು ತಾನೇ ಹೊತ್ತೊಯ್ದಿದ್ದ. ಇದೀಗ ಆಕೆಯ ರುಂಡ ಮರವೊಂದರ ಬಳಿ ಪತ್ತೆಯಾಗಿದೆ.

ಬಾಲಕಿಯ ತಲೆಯ ಜೊತೆಗೆ ಆಕೆಯ ಚಪ್ಪಲಿಯನ್ನೂ ಆತ ಕೊಂಡೊಯ್ದಿದ್ದ. ಇದೀಗ ತಲೆ ಮತ್ತು ಚಪ್ಪಲಿಯನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಕೊಲೆಗಡುಕ ಪ್ರಕಾಶ್ ಈಗಾಗಲೇ ಪೊಲೀಸರ ವಶದಲ್ಲಿದ್ದು, ಆತನ ವಿಚಾರಣೆ ನಡೆಸಿದ ನಂತರ ರುಂಡ ಪತ್ತೆಯಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಹಮ್ಮಿಯಾಲದ ಬೆಟ್ಟವೊಂದರ ಬಳಿ ಕ್ರೂರಿ ಪ್ರಕಾಶ್ ಅವಿತು ಕುಳಿತಿದ್ದ. ಆತನನ್ನು ಸೋಮವಾರಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

More articles

Latest article

Most read