ಸಲ್ಮಾನ್ ಖಾನ್ ‘ಭಜರಂಗಿ ಬಾಯಿಜಾನ್’ ಸಿನಿಮಾದ ಆ ಪುಟ್ಟ ಬಾಲಕಿ ಈಗ ಎಸ್ಎಸ್ಎಲ್‌ಸಿ ಪಾಸ್..!

Most read

ಭಜರಂಗಿ ಬಾಯಿಜಾನ್ ಸಿನಿಮಾ ಯಾರಿಗೆ ತಾನೇ ನೆನಪಿಲ್ಲ ಹೇಳಿ. 9 ವರ್ಷಗಳ ಹಿಂದೆ ಅಂದ್ರೆ 2015ರಲ್ಲಿ ತೆರೆಕಂಡ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ತಾಯಿ ಕಂಡೊಡನೆ ಆ ಮಗು ಓಡುವ ದೃಶ್ಯ, ಪಾಕಿಸ್ತಾನದ ಜರ್ನಿಯಲ್ಲಿ ಆ ಮಗುವಿನ ಜೊತೆಗೆ ಸಲ್ಮಾನ್ ಕಳೆದ ಆ ಸುಂದರ ಕ್ಷಣಗಳು ಒಂಭತ್ತು ವರ್ಷವಾದರೂ ಕಣ್ಣಿಗೆ ಕಟ್ಟಿದಂತೆ ಇದೆ. ಆ ಪುಟ್ಟ ಪೋರಿ ಇದೀಗ ಎಸ್ಎಸ್ಎಲ್‌ಸಿ ಪಾಸ್ ಆಗಿದ್ದಾಳೆ.

ಆ ಪುಟ್ಟ ಬಾಲಕಿಯ ಹೆಸರು ಹರ್ಷಾಲಿ ಮಲೋತ್ರಾ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರೀಲ್ಸ್, ಡ್ಯಾನ್ಸ್ ಅಂತ ಸಿಕ್ಕಾಪಟ್ಟೆ ಫೇಮಸ್. ಎಸ್ಎಸ್ಎಲ್‌ಸಿ ಓದುತ್ತಿದ್ದರು. ರೀಲ್ಸ್ ಮಾಡಿಕೊಂಡು ಎಸ್ಎಸ್ಎಲ್‌ಸಿ ಓದುತ್ತಿದ್ದ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಪಠ್ಯೇತರ ಚಟುವಟಿಕೆಗಳಲ್ಲಿ ಆಕ್ಟೀವ್ ಆಗಿದ್ದ ಕಾರಣಕ್ಕೆ ಟ್ರೋಲ್ ಆಗುತ್ತಿದ್ದರು. ಆದರೆ ಇದೀಗ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದಿದ್ದಾರೆ. ಮುನ್ನಿ ಪಾತ್ರದಲ್ಲಿ ಅಭಿನಯಿಸಿದ್ದ ಹರ್ಷಾಲಿಗೆ ಎಸ್ಎಸ್ಎಲ್‌ಸಿ ಪಾಸ್ ಆಗುವುದು ಕೂಡ ಕಷ್ಟ ಎಂದಿದ್ದರು.

ಹರ್ಷಾಲಿ ಮಲ್ಹೋತ್ರಾ ಸಿಬಿಎಸ್ಸಿ ಸಿಲಬಸ್ ತೆಗೆದುಕೊಂಡಿದ್ದರು. 10ನೇ ತರಗತಿಯಲ್ಲಿ 83 ಪರ್ಸೆಂಟ್ ಅಂಕಗಳನ್ನು ಪಡೆದುಕೊಂಡಿದ್ದಾರೆ. ಅದೂ ಸಿಬಿಎಸ್‌ಸಿ ಸಿಲಬಸ್‌ನಲ್ಲಿ ಉತ್ತಮ ಅಂಕ ಪಡೆದು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. ಈ ಸಂಬಂಧ ವಿಡಿಯೋ ರಿಲೀಸ್ ಮಾಡಿ, ತಮ್ಮ ವಿರುದ್ಧ ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ಕೊಟ್ಟಿದ್ದಾರೆ. ಹರ್ಷಾಲಿಗೆ ಎಲ್ಲರೂ ಶುಭಕೋರಿದ್ದಾರೆ. ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದಿದ್ದಾರೆ.

More articles

Latest article