ಉಗ್ರರಿಗೆ ಸಿಮ್‌ ನೀಡಿದ್ದ ಕೋಲಾರ ಮೂಲದ ಯುವಕನಿಗೆ ಹುಡುಕಾಟ

Most read

ಕೋಲಾರ: ರಾಜ್ಯವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ನಡೆಸಿದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಬಂಧಿಸಿರುವ ಬೆನ್ನಲ್ಲೇ ಇವರಿಗೆ ಸಿಮ್‌ ನೀಡಿದ್ದ ಕೋಲಾರ ಮೂಲದ ಯುವಕನಿಗೆ ನೋಟೀಸ್‌‍ ಜಾರಿ ಮಾಡಿದೆ.

ಬೆಂಗಳೂರಿನ ವೈಟ್‌ ಫೀಲ್ಡ್‌ ನ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೋಲಾರದ ಭಟ್ರಹಳ್ಳಿ ಗ್ರಾಮದ ಸತೀಶ್‌ ಗೆ ಈಗ ಸಂಕಷ್ಟ ಎದುರಾಗಿದೆ. ಕಳೆದ ರಾತ್ರಿ ಎನ್‌ಐಎ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ  ನೀಡಿದ್ದು ಮನೆಯಲ್ಲಿ ಸತೀಶ್‌ ಇಲ್ಲದ ಕಾರಣ ಮನೆಯವರಿಗೆ ನೋಟಿಸ್‌‍ ನೀಡಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯೊಳಗೆ ಬೆಂಗಳೂರಿನ ಎನ್‌ ಐ ಎ ಕಚೇರಿಗೆ ಹಾಜರಾಗಬೇಕೆಂದು ತಿಳಿಸಲಾಗಿತ್ತು. ಆದರೆ ಆತ ನಾಪತ್ತೆಯಾಗಿದ್ದಾನೆ.

ಸರಿಯಾದ ದಾಖಲೆ ಪಡೆಯದೆ ಸಿಮ್‌ ನೀಡಿದ್ದಕ್ಕೆ ಸತೀಶ್‌ ಗೆ ಸಂಕಷ್ಟ ಎದುರಾಗಿದೆ. ಪೊಲೀಸರೂ ಸಹ ಆತನ ಹುಡುಕಾಟ ನಡೆಸಿದ್ದಾರೆ. ಪ್ರಸ್ತುತ ನಿರುದ್ಯೋಗಿಯಾಗಿದ್ದ ಸತೀಶ್‌ ಭಟ್ರಹಳ್ಳಿಯ ತನ್ನ ಅತ್ತೆ ಮನೆಯಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದೆ.

More articles

Latest article