ಭಯೋತ್ಪಾದನೆ ಖಂಡಿಸಿ ಕಪ್ಪು ಬಣ್ಣದಲ್ಲಿ ಮುಖಪುಟ ಪ್ರಕಟಿಸಿದ ಕಾಶ್ಮೀರದ ಪತ್ರಿಕೆಗಳು

Most read

ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಲಾಮ್ ಗಿರಿಧಾಮದಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಪ್ರವಾಸಿಗರು ಮೃತಪಟ್ಟಿದ್ದನ್ನು ವಿರೋಧಿಸಿ ಕಾಶ್ಮೀರದ ಪ್ರಮುಖ ಪತ್ರಿಕೆಗಳು ಇಂದು ತಮ್ಮ ಮುಖಪುಟವನ್ನು ಕಪ್ಪು ಬಣ್ಣದಲ್ಲಿ ಮುದ್ರಿಸಿ ಪ್ರತಿಭಟನೆ ವ್ಯಕ್ತಪಡಿಸಿವೆ.

ಕಪ್ಪು ಬಣ್ಣದ ಮುಖಪುಟದಲ್ಲಿ  ಬಿಳಿ ಅಥವಾ ಕೆಂಪು ಬಣ್ಣದಲ್ಲಿ ಶೀರ್ಷಿಕೆಗಳನ್ನು ನೀಡಲಾಗಿದೆ. ಮಾಧ್ಯಮಗಳೂ ಸಹ ಈ  ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿವೆ. ರೈಸಿಂಗ್ ಕಾಶ್ಮೀರ್, ಗ್ರೇಟರ್ ಕಾಶ್ಮೀರ್, ಕಾಶ್ಮೀರ್ ಉಜ್ಜಾ, ಅಫ್ತಾಬ್ ಮತ್ತು ತೈಮೀಲ್ ಇರ್ಷಾದ್ ಸೇರಿದಂತೆ ಪ್ರಮುಖ ಇಂಗ್ಲಿಷ್ ಮತ್ತು ಉರ್ದು ದಿನಪತ್ರಿಕೆಗಳ ಇಂದಿನ ಸ್ವರೂಪ ಬದಲಾಗಿದೆ.

ಕಾಶ್ಮೀರಿಗಳು ದುಃಖಿತರಾಗಿದ್ದಾರೆ; ಭಯಾನಕ: ಕಾಶ್ಮೀರ ಸುಟ್ಟುಹೋಗಿದೆ, ಎಂಬ ಶೀರ್ಷಿಕೆಯನ್ನು ಇಂಗ್ಲಿಷ್ ಹಾಗೂ ಉರ್ದು ದಿನಪತ್ರಿಕೆಗಳು ಪ್ರಕಟಿಸಿವೆ. ಭಯೋತ್ಪಾದನಾ ಕೃತ್ಯವನ್ನು ಖಂಡಿಸಿ ಕಟುವಾದ ಶಬ್ದಗಳಲ್ಲಿ ಸಂಪಾದಕೀಯ ಪ್ರಕಟಿಸಿವೆ. ಭಯೋತ್ಪಾದನೆಯನ್ನು ಬೇರುಮಟ್ಟದಲ್ಲೇ ಚಿವುಟಿ ಹಾಕಬೇಕು ಎಂದು ಮಾಧ್ಯಮಗಳು ಸರ್ಕಾರವನ್ನು ಆಗ್ರಹಪಡಿಸಿವೆ.

More articles

Latest article