ಥೈವಾನ್‌ ನಲ್ಲಿ ಭೀಕರ ಭೂಕಂಪ: ಸುನಾಮಿಯ ಭೀತಿ

Most read

ಟೋಕಿಯೋ: ಥೈವಾನ್‌ ನಲ್ಲಿ ಹಿಂದೆಂದೂ ಸಂಭವಿಸದ ಭಾರೀ ಭೂಕಂಪ ಸಂಭವಿಸಿದ್ದು, ಸುನಾಮಿ ಸಂಭವಿಸುವ ಸಾಧ್ಯತೆಗಳಿವೆ ಎಂದು ಸುತ್ತಮುತ್ತಲ ದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ.

ಇಂದು ಬೆಳಿಗ್ಗೆ 8 ಗಂಟೆಗೆ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೆಲವೇ ಕ್ಷಣಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಧರೆಗುರುಳಿದವು. ಸ್ವಾಯತ್ತ ದ್ವೀಪ ರಾಷ್ಟ್ರವಾಗಿರುವ ಥೈವಾನ್‌ ನಲ್ಲಿ ಭೂಕಂಪ ಸಂಭವಿಸುತ್ತಿದ್ದಂತೆ ದಕ್ಷಿಣ ಜಪಾನ್‌, ಫಿಲಿಪೈನ್ಸ್‌ ನಲ್ಲಿ ಸುನಾಮಿಯ ಆತಂಕ ಎದುರಾಗಿದೆ. ಫಿಲಿಫೈನ್ಸ್‌ ಕರಾವಳಿಯ ಜನರನ್ನು ಸ್ಥಳೀಯ ಆಡಳಿತ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದೆ.

TVBS ಸುದ್ದಿ ಪೋರ್ಟೊಲ್‌ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಹುವಾಲೀನ್ ಪಟ್ಟಣದಲ್ಲಿ ಕಟ್ಟಡವೊಂದು ಕುಸಿಯುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಥೈವಾನ್‌ ದ್ವೀಪ ರಾಷ್ಟ್ರದ ಎಲ್ಲೆಡೆ ಈ ಭೂಕಂಪನ ಸಂಭವಿಸಿದ್ದು ಓರ್ವ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ.

ಹುವಾಲೀನ್ ಪಟ್ಟಣವೊಂದರಲ್ಲೇ 26 ಕಟ್ಟಡಗಳು ಕುಸಿದುಬಿದ್ದಿವೆ. ಹಲವರು ಕುಸಿದ ಕಟ್ಟಡದ ಅವಶೇಷಗಳಲ್ಲಿ ಸಿಕ್ಕಿಬಿದ್ದಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪ ಇದಾಗಿದ್ದು1999ರ ಸೆಪ್ಟೆಂಬರ್‌ ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿ, 2,400 ಮಂದಿ ಪ್ರಾಣ ಕಳೆದುಕೊಂಡಿದ್ದರು.

More articles

Latest article