ತೆಲಂಗಾಣ: 2024ನೇ ಸಾಲಿನ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ತೆಲಂಗಾಣದ ಯಾದಗಿರಿಗುಟ್ಟಾ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆಯುಟ್ಟು, ಮಲ್ಲಿಗೆ ಹೂ ಮುಡಿದು, ದೇಗುಲಕ್ಕೆ ತೆರಳಿದ್ದ ಪಿಸ್ಕೋವಾ ಕಾಣಿಕೆ ಅರ್ಪಿಸಿ, ದೇವರ ಆಶೀರ್ರ್ವವಾದ ಪಡೆದರು.
ಕ್ರಿಸ್ಟಿನಾ ಪಿಸ್ಕೋವಾ ಅವರು 2024ರಲ್ಲಿ ನಡೆದ 71ನೇ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಮಿಸ್ ವರ್ಲ್ಡ್ 2024 ಫೈನಲ್‌ನಲ್ಲಿ ಅವರು ಕಿರೀಟವನ್ನು ಪಡೆದರು. ಪ್ರಪಂಚದಾದ್ಯಂತ 110 ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜೆಕ್ ಗಣರಾಜ್ಯದವರಾದ ಕ್ರಿಸ್ಟಿನಾ ಫೈನಲ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಯಾದಗಿರಿ ಗುಟ್ಟ ದೇವಸ್ಥಾನಕ್ಕೆ ಭೇಟಿ ನೀಡಿದ್ದು ನನಗೆ ಸಂತೋಷ ಮತ್ತು ಮನಸ್ಸಿಗೆ ಶಾಂತಿಯನ್ನು ತಂದಿತು. ಇದು ಕೇವಲ ಆರಂಭ! ತೆಲಂಗಾಣ ಮತ್ತು ಅದರ ಗುಪ್ತ ರತ್ನಗಳನ್ನು ಇನ್ನಷ್ಟು ನೋಡಲು ಎದುರು ನೋಡುತ್ತಿದ್ದೇನೆ’ ಎಂದು ಕ್ರಿಸ್ಟಿನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯಲಿರುವ ವಿಶ್ವ ಸುಂದರಿ 2025ರ ಪೂರ್ವಭಾವಿ ಕಾರ್ಯಕ್ರಮಕ್ಕೆ ಆಗಮಿಸಿರುವ ಪಿಸ್ಕೋವಾ ತೆಲಂಗಾಣಕ್ಕೆ ಮಂಗಳವಾರ ಆಗಮಿಸಿದ್ದರು. 72ನೇ ವಿಶ್ವ ಸುಂದರಿ ಸ್ಪರ್ಧೆಯು ಮೇ 7 ರಿಂದ 31 ರವರೆಗೆ ತೆಲಂಗಾಣದಲ್ಲಿ ನಡೆಯಲಿದೆ.