ತಮಿಳಿಸೈ ಸೌಂದರರಾಜನ್ ಅವರು ತೆಲಂಗಾಣ ಗವರ್ನರ್ ಮತ್ತು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ರಾಜೀನಾಮೆ ನೀಡಿದ್ದಾರೆ . ಮೂಲಗಳ ಪ್ರಕಾರ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸಹ ಆಗಿರುವ ಸೌಂದರರಾಜನ್ ಅವರು ತಮಿಳುನಾಡು ಬಿಜೆಪಿ ಘಟಕದ ನಾಯಕಿಯಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
62 ವಯಸ್ಸಿನ ಶ್ರೀಮತಿ ಸೌಂದರರಾಜನ್, ನವೆಂಬರ್ 2019 ರಲ್ಲಿ ಆಗಿನ ತೆಲಂಗಾಣ ರಾಜ್ಯದ ಎರಡನೇ ಗವರ್ನರ್ ನೇಮಕಗೊಂಡರು. ಫೆಬ್ರವರಿ 2021 ರಲ್ಲಿ ಪುದುಚೇರಿಯ ಲೆಫ್ಟಿನೆಂಟ್-ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು. ಪುದುಚೇರಿಯ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಕಾರಣ ಅವರು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.