ತೆರಿಗೆ ಹಂಚಿಕೆ: ಕರ್ನಾಟಕಕ್ಕೆ ರೂ. 6,310.40 ಕೋಟಿ; ಉತ್ತರಪ್ರದೇಶಕ್ಕೆ ರೂ. 31,039.84 ಕೋಟಿ ಬಿಡುಗಡೆ ಮಾಡಿದ ಕೇಂದ್ರ ಸರಕಾರ

Most read

ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ರೂ. 6,310.40 ಕೋಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಈ ಮೂಲಕ ರಾಜ್ಯಕ್ಕೆ ತಾರತಮ್ಯವನ್ನು ಮುಂದುವರೆಸಿದೆ. ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ ಒಟ್ಟು ರೂ. 1,73,030 ಕೋಟಿ ಬಿಡುಗಡೆಗೊಳಿಸಿದೆ.

15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ .41 ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ. 2024ರ ಡಿಸೆಂಬರ್ ತಿಂಗಳ ಕಂತಿನಲ್ಲಿ ರೂ. 89,086 ಕೋಟಿ ಬಿಡುಗಡೆಗೊಳಿಸಿತ್ತು. ರಾಜ್ಯಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಈ ಕಂತು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ರಾಜ್ಯಗಳಿಗೆ ಬಿಡುಗಡೆಯಾದ ಹಣದ ಪ್ರಮಾಣ ಹೀಗಿದೆ.

 ಆಂಧ್ರಪ್ರದೇಶ  (ರೂ.7,002.52 ಕೋಟಿ); ಬಿಹಾರ (ರೂ.17,403.36 ಕೋಟಿ); ಛತ್ತೀಸಗಢ (ರೂ.5,895.13 ಕೋಟಿ); ಗುಜರಾತ್ (ರೂ.6,017.99 ಕೋಟಿ); ಹರಿಯಾಣ–(₹1,891.22 ಕೋಟಿ) ಮಧ್ಯಪ್ರದೇಶ( ₹13,582.86 ಕೋಟಿ); ಮಹಾರಾಷ್ಟ್ರ(ರೂ.10,930.31 ಕೋಟಿ); ತಮಿಳುನಾಡು( ₹7,057.89 ಕೋಟಿ);  ಉತ್ತರಪ್ರದೇಶ(₹31,039.84 ಕೋಟಿ) ರಾಜಸ್ಥಾನ( ₹10,426.78 ಕೋಟಿ);

More articles

Latest article