ಸಂಪರ್ಕ-ಸಂವಹನಗಳ ಕ್ರಾಂತಿಯ ಹೊರತಾಗಿಯೂ ಉಳಿದುಬಿಟ್ಟ ಒಂಟಿತನ, ನ್ಯೂ-ನಾರ್ಮಲ್ ಆಗಿಬಿಟ್ಟ ಸ್ವೇಚ್ಛೆ, ಮಾನವನ ಮನೋದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡ ಉದ್ಯಮಗಳು, ಪ್ರೀತಿಯನ್ನು ಕೊಡುಕೊಳ್ಳುವಿಕೆಗಳ ವ್ಯವಹಾರದಂತೆ ಬದಲಾಯಿಸಿಬಿಟ್ಟ ಮಾರುಕಟ್ಟೆ ವ್ಯವಸ್ಥೆ... ಹೀಗೆ ನಮ್ಮ ಸುತ್ತಲಿನ ಸಾಕಷ್ಟು ಸಂಗತಿಗಳು ಸಿನಿಮೀಯ...
ನೈಟ್ ಲೈಫ್ ಸಂಸ್ಕೃತಿಯು ಮಹಾನಗರಗಳಲ್ಲಿ ಬದುಕಿರುವ ನಮ್ಮೆಲ್ಲರ ಮನೆಯ ಡ್ರಾಯಿಂಗ್ ರೂಮಿಗೆ, ಬೆಡ್ರೂಮಿಗೂ ದಾಳಿಯಿಟ್ಟಿದೆ ಎಂದು ನಾನು ನಿಸ್ಸಂಕೋಚವಾಗಿ ಹೇಳಬಲ್ಲೆ. ಇದರ ಹೊಸ ಆವೃತ್ತಿಯೆಂಬಂತೆ ಸದ್ಯ ಒ.ಟಿ.ಟಿ ವೇದಿಕೆಗಳು ನಮ್ಮೆಲ್ಲರ ಬದುಕನ್ನು ಆವರಿಸಿಕೊಂಡಿವೆ....