ಪೂರ್ಣ ಪ್ರಮಾಣದಲ್ಲಿ ನ್ಯಾಯಾಧೀಶರಿದ್ದರು ಮುಗಿಯದ ಪ್ರಕರಣಗಳು: ಸುಪ್ರೀಂನಲ್ಲಿ 83 ಸಾವಿರ ಪ್ರಕರಣ ಬಾಕಿ

Most read

ಪೂರ್ಣ ಪ್ರಮಾಣದಲ್ಲಿ ನ್ಯಾಯಮೂರ್ತಿಗಳ ನೇಮಕಕ್ಕೆ ಮುತುವರ್ಜಿ ವಹಿಸಿದ್ದರೂ, ವಿಚಾರಣೆ ಪೂರ್ಣವಾಗದೇ ಉಳಿಯುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದುವರೆಗೂ ಸರಿಸುಮಾರು 82,831 ಪ್ರಕರಣಗಳು ಬಾಕಿ ಇವೆ.

ಕಾಲ ಕಾಲಕ್ಕೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುತ್ತಲೇ ಇದ್ದರು ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. 2009ರಲ್ಲಿ 26 ರಿಂದ 31ಕ್ಕೆ ಹೆಚ್ಚಿಸಲಾಯಿತು. ಆದರೂ 50 ಸಾವಿರ ಇದ್ದ ಕೇಸ್‌ ಸಂಖ್ಯೆ 2013 ರಲ್ಲಿ 66 ಸಾವಿರಕ್ಕೆ ಏರಿಕೆಯಾಯಿತು. 2019ರಲ್ಲಿ 31 ಇದ್ದ ನ್ಯಾಯಾಧೀಶರ ಸಂಖ್ಯೆಯನ್ನು 34ಕ್ಕೆ ಹೆಚ್ಚಳ ಮಾಡಿದ ಬಳಿಕ ಮೊದಲ ಬಾರಿಗೆ ಬಾಕಿ ಪ್ರಕರಣ ಸಂಖ್ಯೆ 82 ಸಾವಿರ ಗಡಿ ದಾಟಿದೆ.

2019 ಅಂದರೆ ರಂಜನ್‌ ಗೊಗೋಯ್‌ ಮುಖ್ಯ ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ಬಾಕಿ ಕೇಸ್‌ ಸಂಖ್ಯೆ 60 ಸಾವಿರಕ್ಕೆ ಏರಿಕೆಯಾಗಿತ್ತು. ಸಿಜೆಐ ಎಸ್‌.ಎ. ಬೊಬ್ಡೆ ಅವರ ಕಾಲದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಬಾಕಿ ಪ್ರಕರಣ ಸಂಖ್ಯೆ 65 ಸಾವಿರಕ್ಕೇರಿತು. ನ್ಯಾ. ಎನ್‌.ವಿ. ರಮಣ ಆಗಿದ್ದಾಗ ಅಂದರೆ 2021-22ರಲ್ಲಿ ಬಾಕಿ ಕೇಸ್‌ ಸಂಖ್ಯೆ 70 ಸಾವಿರ ದಾಟಿತು. ಸಿಜೆಐ ಯು.ಯು. ಲಲಿತ್‌ ಅವರ ಅವಧಿಯಲ್ಲಿ ಸಂಖ್ಯೆ 79 ಸಾವಿರ ಪ್ರಕರಣಗಳಿದ್ದವು. ಈಗ ಸಿಜೆಐ ಡಿ.ವೈ. ಚಂದ್ರಚೂಡ್‌ ಅವರ ಕಾಲಘಟ್ಟದಲ್ಲಿ ಹೊಸದಾಗಿ 4 ಸಾವಿರ ಕೇಸ್‌ಗಳು ಸೇರ್ಪಡೆಯಾಗಿದ್ದು, ಬಾಕಿ ಸಂಖ್ಯೆ 82,831ಕ್ಕೆ ಹೆಚ್ಚಳವಾಗಿದೆ.

More articles

Latest article