ಸನ್‌ ರೂಫ್‌ ನಿಂದ ಹೊರಗೆ ನಿಂತು ಪ್ರಯಾಣ; ದಂಡ ವಿಧಿಸಿದ ಪೊಲೀಸರು

Most read

ಬೆಂಗಳೂರು: ಬೆಂಗಳೂರಿನಲ್ಲಿ ಕಾರಿನಲ್ಲಿ ಸಂಚರಿಸುವಾಗ ಸನ್‌ ರೂಫ್‌ ನಿಂದ ಹೊರಗೆ ನಿಂತು ಪ್ರಯಾಣಿಸುತ್ತಿದ್ದವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ. ಈ ರೀತಿ ಪ್ರಯಾಣಿಸುವುದು ಸಂಚಾರ ನಿಯಮಗಳಿಗೆ ಕಾನೂನುಬಾಹಿರ ಎಂದೂ ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರು ಸಂಚಾರ ಪೊಲೀಸರು ಎಕ್ಸ್‌ ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಒಂದು ತಪ್ಪು ನಡೆಯಿಂದಾಗಿ ಜೀವಕ್ಕೆ ಅಪಾಯಗಳು ಎದುರಾಗಬಹುದು. ಮನರಂಜನೆಗಾಗಿ ಇಂತಹ ವರ್ತನೆ ಸರಿಯಿಲ್ಲ. ಇದು ಎಲ್ಲರಿಗೂ ಅಪಾಯಕಾರಿ. ರೋಮಾಂಚನಕ್ಕಾಗಿ ಜೀವಗಳನ್ನು ಪಣಕ್ಕಿಡಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಅಜಾರೂಕತೆಯಿಂದ ವಾಹನೆ ಚಾಲನೆ ಮಾಡಿದ ಸವಾರನ ವಿರುದ್ಧ ಆರ್‌.ಟಿ ನಗರ ಸಂಚಾರ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ದಂಡ ವಿಧಿಸಲಾಗಿದೆ ಎಂದೂ ಎಚ್ಚರಿಕೆ ನೀಡಿದ್ದಾರೆ. ಸನ್‌ ರೂಫ್‌ ಪ್ರಯಾಣ, ವ್ಹೀಲಿಂಗ್‌ ವಿರುದ್ಧ ಸಂಚಾರ ಪೊಲೀಸರು ನಿರಂತರವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೂ ಯುವಕರು ಎಚ್ಚರಿಕೆ ವಹಿಸದೆ ಜೀವಕ್ಕೆ ಅಪಾಯ ತಂದುಕೊಳ್ಳುವ ಪ್ರಕರಣಗಳು ವರದಿಯಾಗುತ್ತಲೇ ಇವೆ.

More articles

Latest article