3.25 ಲಕ್ಷ ಕೋಟಿ ದಾಟಿದ ರಾಜ್ಯದ ಜೈವಿಕ ಆರ್ಥಿಕತೆ

ರಾಜ್ಯದ ಜೈವಿಕ ಆರ್ಥಿಕತೆಯ ವರದಿ 2025 ಬಿಡುಗಡೆ ಮಾಡಿದ ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು :  ರಾಜ್ಯದ ಜೈವಿಕ ಆರ್ಥಿಕತೆಯು (ಬಯೋ ಎಕಾನಮಿ) 2025ರಲ್ಲಿ 3 ಲಕ್ಷದ, 25 ಸಾವಿರದ 360  ಕೋಟಿಗಳಿಗೆ (39.2 ಶತಕೋಟಿ ಡಾಲರ್‌)  ತಲುಪಿದೆ. ಸಂಶೋಧನೆ-ನೇತೃತ್ವದ ಜೊತೆಗೆ ತಯಾರಿಕೆ, ವಿತರಣೆ,  ಸೇವೆಗಳವರೆಗೆ — ಸಂಪೂರ್ಣ ಮೌಲ್ಯ ಸರಪಳಿ  ಒಳಗೊಂಡಿರುವ, ತಯಾರಿಕೆ ಕೇಂದ್ರಿತ ಜೈವಿಕ ಆರ್ಥಿಕತೆಯು ರಾಜ್ಯದಲ್ಲಿ  ಗಮನಾರ್ಹವಾಗಿ ವಿಸ್ತರಣೆಯಾಗುತ್ತಿದೆ.

ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯು (ಕೆಐಟಿಎಸ್‌),  ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ್‌ಇ)   ಸಹಯೋಗದಲ್ಲಿ ಸಿದ್ಧಪಡಿಸಿರುವ ರಾಜ್ಯದ ಜೈವಿಕ ಆರ್ಥಿಕತೆಯ ವರದಿ 2025ʼಯಲ್ಲಿ ಈ ಸಂಗತಿ ಉಲ್ಲೇಖವಾಗಿದೆ.

ದೇಶದ ಅತ್ಯಂತ ಪ್ರಬುದ್ಧ ಮತ್ತು ನಾವೀನ್ಯತೆ ಆಧಾರಿತ  ಜೈವಿಕ ತಂತ್ರಜ್ಞಾನ   ವ್ಯವಸ್ಥೆಯಾಗಿ ಕರ್ನಾಟಕವು ಸುಸ್ಥಿರ ರೀತಿಯಲ್ಲಿ ತನ್ನ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವುದರ ಮೇಲೆ ಈ ವರದಿಯು ಬೆಳಕು ಚೆಲ್ಲಿದೆ.

ಗಮನಾರ್ಹ ಪಾಲು: ವರದಿ ಬಿಡುಗಡೆ ಮಾಡಿ ಮಾತನಾಡಿದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ   ಸಚಿವ   ಪ್ರಿಯಾಂಕ್ ಖರ್ಗೆ ಅವರು, ʼಈ ವರದಿಯು ರಾಜ್ಯದ ಜೈವಿಕ ಆರ್ಥಿಕತೆಯ ಅಂಕಿ ಸಂಖ್ಯೆಗಳಲ್ಲಿನ ಹೆಚ್ಚಳವನ್ನಷ್ಟೇ ಪ್ರತಿಬಿಂಬಿಸುತ್ತಿಲ್ಲ.  ರಾಜ್ಯದ ಸಮಗ್ರ ಆರ್ಥಿಕ ವ್ಯವಸ್ಥೆಯಲ್ಲಿ ಜೈವಿಕ ಆರ್ಥಿಕತೆಯು ಗಮನಾರ್ಹ ಪಾಲು ಹೊಂದಿರುವುದನ್ನೂ  ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಜೈವಿಕ ತಂತ್ರಜ್ಞಾನವು ಇನ್ನು ಮುಂದೆ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿರದೆ,  ಆರ್ಥಿಕ ಬೆಳವಣಿಗೆ, ಕೈಗಾರಿಕಾ ನಾವೀನ್ಯತೆ ಮತ್ತು ಸಾಮಾಜಿಕ ಪ್ರಭಾವದ ಕೇಂದ್ರ ಚಾಲಕ ಶಕ್ತಿಯಾಗಿ ಅಭಿವೃದ್ಧಿಗೊಳ್ಳುತ್ತ ಮುನ್ನಡೆಯುತ್ತಿದೆ. ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳಿಗೆ  ಬೆಂಬಲ, ನಾವೀನ್ಯತೆ ಮೂಲಸೌಕರ್ಯಗಳ ಬಲಪಡಿಸುವಿಕೆ ಮತ್ತು ಬೆಳವಣಿಗೆಯು ಬೆಂಗಳೂರು  ಆಚೆಗಿನ   ಪ್ರತಿಯೊಂದು ಪ್ರದೇಶಕ್ಕೂ ತಲುಪುವಂತೆ ನೋಡಿಕೊಳ್ಳುವ ಮೂಲಕ   ಸಮಗ್ರ  ಜೈವಿಕ ಉತ್ಪಾದನಾ ಆರ್ಥಿಕತೆ  ನಿರ್ಮಿಸುವುದರತ್ತ  ರಾಜ್ಯ ಸರ್ಕಾರವು ಹೆಚ್ಚು ಗಮನ ನೀಡಲಿದೆ ” ಎಂದು ಹೇಳಿದ್ದಾರೆ.

More articles

Latest article

Most read