ಕೋಲಾರದಲ್ಲಿ ರಾಜ್ಯ ಮಟ್ಟದ ಜನಪರ ಉತ್ಸವಕ್ಕೆ ಚಾಲನೆ

Most read

ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಇವರುಗಳು ಸಹಯೋಗದಲ್ಲಿ ‌ವಿಶೇಷ ಘಟಕ ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪರ ಉತ್ಸವ- 2025 ಅನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ  ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ  ಬಿ.ಎಸ್.ಸುರೇಶ (ಬೈರತಿ) ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು

ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ತಂಗಡಗಿ,ಕೋಲಾರ ಸಂಸದ ಎಂ.ಮಲ್ಲೇಶ್ ಬಾಬು,‌ ಜಿಲ್ಲೆಯ ಶಾಸಕರುಗಳಾದ ಕೂತ್ತೂರು ಮಂಜುನಾಥ, ವೆಂಕಟಶಿವಾರೆಡ್ಡಿ, ಎಂ.ಎಲ್. ಅನಿಲ ಕುಮಾರ್, ಇಂಚರ ಗೋವಿಂದರಾಜ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೇರಿದಂತೆ ‌ಜಿಲ್ಲೆಯ ಹಲ ಜನಪ್ರತಿನಿಧಿಗಳು, ಗಣ್ಯರು, ‌ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು

ಎರಡು ದಿನಗಳ ಕಾಲ ನಡೆಯುವ ಜನಪರ ಉತ್ಸವ ದಲ್ಲಿ ‌ಕೋಲಾರ‌ ಜಿಲ್ಲೆ ಸೇರಿದಂತೆ ಒಟ್ಟು 21 ಜಿಲ್ಲೆಗಳ ಕಲಾವಿದರು, ಕಲಾ ತಂಡಗಳು ಭಾಗವಹಿಸುತ್ತಿರುವುದು ‌ವಿಶೇಷವಾಗಿದೆ.

More articles

Latest article