ಮರ ಕಡಿಯದಂತೆ ಎಚ್ಚರ ವಹಿಸಲು ಸಿಬ್ಬಂದಿಗೆ ಆದೇಶ

ಅಕ್ರಮ ಮರ ಕಡಿತಲೆಗೆ ಸಿಬ್ಬಂದಿಯೇ ಹೊಣೆ : ಈಶ್ವರ ಖಂಡ್ರೆ

ಬೆಂಗಳೂರು : ರಸ್ತೆಗಳಲ್ಲಿ ಹಾಗೂ ಅರಣ್ಯದೊಳಗೆ ಮರ ಕಡಿಯದಂತೆ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಈಶ್ವರ ಖಂಡ್ರೆ, ಮಧ್ಯಪ್ರಾಚ್ಯದಲ್ಲಿ ನಿರ್ಮಾಣವಾಗಿರುವ ಸಂಘರ್ಷ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಅಡುಗೆ ಅನಿಲ ಅಭಾವ ತಲೆದೋರಿದ್ದು,  ಇದರ ಬಿಸಿ ಕರ್ನಾಟಕಕ್ಕೂ ತಟ್ಟಿದೆ.

ಹೊಟೆಲ್, ರೆಸಾರ್ಟ್, ಹೋಂಸ್ಟೇಗಳಿಗೆ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದೊರಕದ ಸಮಸ್ಯೆ ಆಗಿದ್ದರೆ, ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲೂ ವ್ಯತ್ಯಯ ಆಗುತ್ತಿರುವ ಹಿನ್ನೆಲೆಯಲ್ಲಿ ಸೌದೆಗೆ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಗಮನಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅರಣ್ಯದೊಳಗೆ ಅರಣ್ಯದಂಚಿನಲ್ಲಿ ಅಷ್ಟೇ ಅಲ್ಲದೆ, ಇಲಾಖೆಯ ನೆಡುತೋಪು, ಸರ್ಕಾರಿ ಜಮೀನು, ರಸ್ತೆ ಬದಿ ಬೆಳೆದ ಮರಗಳಿಗೂ ಕೊಡಲಿ ಪೆಟ್ಟು ಬೀಳುವ ಅಪಾಯವಿದ್ದು, ಇಲಾಖೆ ಯಾವುದೇ ವೃಕ್ಷ ಅಕ್ರಮ ಕಡಿತಲೆ ಆಗದಂತೆ ಕಟ್ಟೆಚ್ಚರ ವಹಿಸುವುದು ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲ ವೃತ್ತದ. ಎಲ್ಲ ವಲಯಗಳಲ್ಲೂ ಸೂಕ್ತ ಗಸ್ತು, ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಒಂದೊಮ್ಮೆ ಅರಣ್ಯ. ಸರ್ಕಾರಿ ಜಮೀನಿನಲ್ಲಿ ಅಕ್ರಮ ಮರ ಕಡಿತಲೆ ಆದರೆ ಸಂಬಂಧಿತ ವಲಯದ ಅಧಿಕಾರಿ, ಸಿಬ್ಬಂದಿಯನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. 

More articles

Latest article

Most read