ಜಾತಿವಾದದ ಬಗ್ಗೆ ಮಾತನಾಡಿದ ಜಾಹ್ನವಿ : ಅಂಬೇಡ್ಕರ್-ಗಾಂಧೀಜಿ ವಾದ ನೋಡಲು ಬಯಸಿದ ಶ್ರೀದೇವಿ ಪುತ್ರಿ

Most read

ಸಿನಿಮಾ ಸೆಲೆಬ್ರೆಟಿಗಳು ಎಂದರೆ ಸಾಮಾಜಿಕ ವಿಚಾರಗಳಿಂದ ದೂರ ದೂರ ಅಂತಾನೇ ಹೇಳಬಹುದು. ಯಾಕಂದ್ರೆ ಕೆಲವು ವಿಚಾರಗಳ ಬಗ್ಗೆ ಹೆಚ್ಚು ಅರಿವು ಇರುವುದಿಲ್ಲ ಎಂದೇ ಹೇಳುತ್ತಾರೆ. ದೇವತಾ ಮನುಷ್ಯರಂತೆ ಇದ್ದು ಬಿಡುತ್ತಾರೆ ಎಂದೇ ಹಲವರು ಹೇಳುತ್ತಾರೆ. ಆದರೆ ಇದೀಗ ಜಾಹ್ನವಿ ಕಪೂರ್ ಆಡಿದ ಮಾತುಗಳು ಎಲ್ಲರ ಚಿತ್ತ ಕದ್ದಿದೆ.

ಶ್ರೀದೇವಿ ಪುತ್ರಿ ಸದ್ಯ ಬಾಲಿವುಡ್ ಅಲ್ಲದೇ ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ದೇವರ ಚಿತ್ರದಲ್ಲಿ ನಟಿಸಿದ್ದು, ರಾಮ್ ಚರಣ್ ಮುಂದಿನ ಸಿನಿಮಾಗೂ ಆಯ್ಕೆಯಾಗಿದ್ದಾರೆ. ಇದೀಗ ಜಾತಿವಾದದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಾಹ್ನವಿ ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ವಾದವನ್ನು ನೋಡಬೇಕು ಎಂದಿದ್ದಾರೆ.

‘ಅಂಬೇಡ್ಕರ್ ಅವರು ತಮ್ಮ ನಿಲುವು ಏನು ಎನ್ನುವುದರ ಬಗ್ಗೆ ಮೊದಲಿನಿಂದಲೂ ಸ್ಪಷ್ಟ ಮತ್ತು ನಿಷ್ಠುರರಾಗಿದ್ದರು ಎಂದು ನಾನು ಭಾವಿಸುತ್ತೇನೆ. ಆದರೆ ಗಾಂಧಿಯ ದೃಷ್ಠಿಕೋನವು ಹೆಚ್ಚು ಹೆಚ್ಚು ತೆರೆದುಕೊಂಡಂತೆ ವಿಕಸನಗೊಂಡಿತ್ತು ಎಂದು ನಾನು ಭಾವಿಸುತ್ತೇನೆ. ನಮ್ಮ ಸಮಾಜದಲ್ಲಿರುವ ಈ ಜಾತಿವಾದದ ಸಮಸ್ಯೆ ಬಗ್ಗೆ ಮಾತನಾಡುವುದಾದರೆ ಆ ಬಗ್ಗೆ ಮೂರನೇ ವ್ಯಕ್ತಿಯಿಂದ ಮಾಹಿತಿಯನ್ನು ಸಂಗ್ರಹಿಸುವುದಕ್ಕೂ ಅಲ್ಲಿದ್ದು ನಿಜವಾಗಿ ಬದುಕುವುದಕ್ಕೂ ಬಹಳ ವ್ಯತ್ಯಾಸವಿದೆ ಎಂದಿದ್ದಾರೆ.

ಇದೆ ವೇಳೆ ನಿರೂಪಕ ನಿಮ್ಮ ಶಾಲೆಯಲ್ಲಿ ಜಾತಿಯ ಬಗ್ಗೆ ಚರ್ಚೆಗಳು ನಡೆದಿತ್ತಾ ಎಂದು ಕೇಳಿದಾಗ ಇಲ್ಲ, ಶಾಲೆಯಲ್ಲಿ ಮಾತ್ರ ಅಲ್ಲ ನಮ್ಮ ಮನೆಯಲ್ಲೂ ಯಾವತ್ತಿಗೂ ಅಂತಹ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಜಾಹ್ನವಿ ಸಂದರ್ಶನದಲ್ಲಿ ಹೇಳಿದ್ದಾರೆ. ನಟಿಯ ಜ್ಞಾನ ಮತ್ತು ಅಧ್ಯಯನದ ಬಗ್ಗೆ ಈಗ ಸಾಕಷ್ಟು ಪಾಸಿಟಿವ್ ಚರ್ಚೆಯಾಗುತ್ತಿದೆ.

More articles

Latest article