ದಕ್ಷಿಣ ಭಾರತೀಯರು ಡ್ಯಾನ್ಸ್‌ ಬಾರ್‌ ನಡೆಸಲು ಯೋಗ್ಯರು: ಶಿವಸೇನಾ ಶಾಸಕನ ವಿವಾದಾತ್ಮಕ ಹೇಳಿಕೆ

Most read

ಮುಂಬೈ: ಶಾಸಕರ ನಿವಾಸದಲ್ಲಿ ಊಟ ಸರಿ ಇಲ್ಲ ಎಂದು ಕ್ಯಾಂಟೀನ್‌ ಗುತ್ತಿಗೆದಾರನಿಗೆ ಹೊಡೆದಿದ್ದ ಶಿವಸೇನೆ ಶಾಸಕ ಸಂಜಯ್‌ ಗಾಯಕ್ವಾಡ್‌ ಇಂದು ದಕ್ಷಿಣ ಭಾರತೀಯರು ಕೇವಲ ಡ್ಯಾನ್ಸ್ ಬಾರ್‌ ಮತ್ತು ಲೇಡೀಸ್‌‍ ಬಾರ್‌ಗಳನ್ನು ನಡೆಸಲು ಮಾತ್ರ ಯೋಗ್ಯರು ಅವರಿಗೆ ಮಹಾರಾಷ್ಟ್ರದಲ್ಲಿ ಆಹಾರ ಪೂರೈಕೆ ಒಪ್ಪಂದಗಳನ್ನು ನೀಡಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶೆಟ್ಟಿ ಎಂಬ ಗುತ್ತಿಗೆದಾರನಿಗೆ ಕ್ಯಾಂಟೀನ್‌ ನಡೆಸಲು ಗುತ್ತಿಗೆ ಕೊಟ್ಟಿದ್ದು ಏಕೆ? ಗುತ್ತಿಗೆಯನ್ನು ಮರಾಠಿ ವ್ಯಕ್ತಿಗೆ ನೀಡಿ. ನಾವು ಏನು ತಿನ್ನುತ್ತೇವೆ ಎಂದು ಅವರಿಗೆ ತಿಳಿದಿದೆ ಮತ್ತು ನಮಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡುತ್ತಾರೆ ಎಂದಿದ್ದಾರೆ.

ದಕ್ಷಿಣ ಭಾರತೀಯರು ಕೇವಲ ಡ್ಯಾನ್ಸ್‌ ಬಾರ್‌ ಮತ್ತು ಲೇಡೀಸ್‌‍ ಬಾರ್‌ಗಳನ್ನು ಮಾತ್ರ ನಡೆಸುತ್ತಾರೆ. ಅವರು ಮಹಾರಾಷ್ಟ್ರದ ಸಂಸ್ಕೃತಿಯನ್ನು ಹಾಳು ಮಾಡುತ್ತಾರೆ. ಅವರು ನಮ್ಮ ಮಕ್ಕಳನ್ನು ಭ್ರಷ್ಟಗೊಳಿಸಿದ್ದಾರೆ. ಅವರು ಉತ್ತಮ ಆಹಾರವನ್ನು ಹೇಗೆ ನೀಡುತ್ತಾರೆ? ಎಂದು ಗಾಯಕ್ವಾಡ್‌ ಪ್ರಶ್ನಿಸಿದ್ದಾರೆ.

ಶಾಸಕರ ನಿವಾಸದಲ್ಲಿ ಹಳಸಿದ ಆಹಾರವನ್ನು ಬಡಿಸಿದ ಆರೋಪದ ಮೇಲೆ ಕ್ಯಾಂಟೀನ್‌ ಗುತ್ತಿಗೆದಾರನನ್ನು ಹೊಡೆದ ಒಂದು ದಿನದ ನಂತರ ಬುಲ್ದಾನ್‌ ಕ್ಷೇತ್ರದ ಶಾಸಕರೂ ಆದ ಸಂಜಯ್‌ ಗಾಯಕ್ವಾಡ್‌ ಈ ಹೇಳಿಕೆ ನೀಡಿದ್ದಾರೆ.

ಶಾಸಕ ಹಲ್ಲೆ ನಡೆಸುವ ವಿಡಿಯೋ ವೈರಲ್‌ ಆದ ನಂತರ ಅವರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍ ಅವರೂ ಶಾಸಕರ ಕೃತ್ಯವನ್ನು ಖಂಡಿಸಿ ಅಂತಹ ನಡವಳಿಕೆಯು ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ತಪ್ಪು ಸಂದೇಶವನ್ನು ರವಾನಿಸುತ್ತದೆ. ಇಂತಹ ನಡವಳಿಕೆ ಯಾರಿಗೂ ಯೋಗ್ಯವಲ್ಲ. ಇದು ರಾಜ್ಯ ವಿಧಾನಸಭೆಯ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

More articles

Latest article