ಅಭಿಷೇಕ್‌ ಅವಿವಾ ದಂಪತಿಗೆ ಗಂಡುಮಗು; ಅಜ್ಜಿಯಾದ ಸಂಭ್ರಮದಲ್ಲಿ ಸುಮಲತಾ

ಬೆಂಗಳೂರು: ಕನ್ನಡದ ರೆಬೆಲ್‌ ಸ್ಟಾರ್ ಅಂಬರೀಷ್‌ ಸುಮಲತಾ ಮನೆಯಲ್ಲಿ ಸಮಭರಮದ ವತಾವರಣ. ಇವರ ಪುತ್ರ ನಟ ಅಭಿಷೇಕ್-ಅವಿವಾ ದಂಪತಿಗೆ ಗಂಡು ಮಗುವಾಗಿದೆ. ಅಜ್ಜಿ ಸುಮಲತಾ ಅಂಬರೀಶ್ ಮೊಮ್ಮಗನನ್ನು ಎತ್ತಿಕೊಂಡ ಫೋಟೋ ವೈರಲ್ ಆಗುತ್ತಿದ್ದು ಅವರ ಅಭಿಮಾನಿಗಳು ಸಂಭ್ರಮಪಡಲು ಕಾರಣವಾಗಿದೆ. ಜೂನ್ 5, 2023ರಲ್ಲಿ ಅಭಿಷೇಕ್-ಅವಿವಾ ವಿವಾಹ ನಡೆದಿತ್ತು.

ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೆಪ್ಟೆಂಬರ್ 18, 2024ರಲ್ಲಿ ಅವರ ಸೀಮಂತ ಕೂಡ ಅದ್ದೂರಿಯಾಗಿ ನಡೆದಿತ್ತು.

ಅಂಬರೀಶ್ ಹಾಗೂ ಅಭಿಷೇಕ್ ಅಭಿಮಾನಿಗಳಿಗಂತೂ ಹೇಳತೀರದ ಸಂಭ್ರಮ. ಗಂಡು ಮಗುವಿನ ಜನನವಾದ ಕಾರಣ ಮತ್ತೆ ಅಂಬರೀಶ್ ಅವರೇ ಜನಿಸಿ ಬಂದಿದ್ದಾರೆ ಎಂದು ಸಂಭ್ರಮ ಪಡುತ್ತಿದ್ದಾರೆ.. ಮಂಡ್ಯದ ಮಾಜಿ ಸಂಸದೆಯೂ ಆಗಿರುವ ನಟಿ ಸಂಸದೆ ಸುಮಲತಾ ತಮ್ಮ ಮೊಮ್ಮಗುವನ್ನು ಎತ್ತಿ ಮುದ್ದಾಡಿದ್ದಾರೆ. ಅಭಿಷೇಕ್ ಅಂಬರೀಷ್‌ ಗೆ ಅಪ್ಪನಾದ ಖುಷಿ. ಆಗಲೇ ಅಭಿಮಾನಿಗಳು ಏನು ಹೆಸರಿಡುತ್ತೀರಿ ಎಂದು ಕೇಳಲು ಆರಂಭಿಸಿದ್ದಾರೆ.

More articles

Latest article

Most read