ಮಡಿಕೇರಿ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಕಳೆದ ವಾರ ಸಂಭವಿಸಿದ್ದ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದ ವೀರಯೋಧ ದಿವಿನ್ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರದ ಮಾಲಂಬಿ ಗ್ರಾಮದಲ್ಲಿ ಸೇನಾ ಗೌರವಗಳೊಂದಿಗೆ ಬುಧವಾರ ನೆರವೇರಿತು.
ಇದಕ್ಕೂ ಮುನ್ನ ಕುಶಾಲನಗರದಿಂದ ಹೊರಟ ಅವರ ಪಾರ್ಥಿವ ಶರೀರದ ವಾಹನಕ್ಕೆ ದಾರಿಯುದ್ದಕ್ಕೂ 10ಕ್ಕೂ ಅಧಿಕ ಗ್ರಾಮಗಳ ಜನರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಪುಷ್ಪನಮನ ಸಲ್ಲಿಸಿದರು. ಆಲೂರು ಸಿದ್ದಾಪುರದ ಶಾಲಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಕ್ಕೂ ಅಧಿಕ ಸಾರ್ವಜನಿಕರು ಹುತಾತ್ಮ ಯೋಧ ದಿವಿನ್ ಅವರ ಅಂತಿಮ ದರ್ಶನ ಪಡೆದರು. ನಂತರ, ಮಾಲಂಬಿಯಲ್ಲಿನ ಅವರ ಮನೆಯಲ್ಲಿ ದಿವಿನ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ನಂತರ, ಅವರ ತೋಟದಲ್ಲಿ ಅವರ ಸಂಬಂಧಿ ಚಿರಾಗ್ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿತು.