ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣವನ್ನು ಸಿಂಗಪೂರ್‌ ಮಾದರಿಯಲ್ಲಿ ಅಭಿವೃದ್ಧಿ : ರಾಮಲಿಂಗಾರೆಡ್ಡಿ

'ಪ್ರಾಜೆಕ್ಟ್ ಮೆಜೆಸ್ಟಿಕ್' ಯೋಜನೆ ಜಾರಿ

ಬೆಂಗಳೂರು : ರಾಜ್ಯದ ಹೆಮ್ಮೆಯ ಸಾರಿಗೆ ಕೇಂದ್ರವಾಗಿರುವ ಬೆಂಗಳೂರಿನ ಮೆಜೆಸ್ಟಿಕ್ ಅಥವಾ ಕೆಂಪೇಗೌಡ ಬಸ್ ನಿಲ್ದಾಣವು ಶೀಘ್ರದಲ್ಲೇ ಅಂತರಾಷ್ಟ್ರೀಯ ದರ್ಜೆಯ ರೂಪ ಪಡೆಯಲಿದೆ. ಕಳೆದ 60 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ನಿಲ್ದಾಣವನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮರು ಅಭಿವೃದ್ಧಿಪಡಿಸಲು ಸರ್ಕಾರವು ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗರೆಡ್ಡಿ  ತಿಳಿಸಿದರು.

ಇಂದು ವಿಧಾನಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯರಾದ ಎಂ. ನಾಗರಾಜು ಅವರು ನಿಯಮ-330ರ ಅಡಿಯಲ್ಲಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಸಚಿವರು, ಅತಿ ದೊಡ್ಡ ಸಾರಿಗೆ ಕೇಂದ್ರ  ಈ ಯೋಜನೆಯು ಕೇವಲ ಬಸ್ ನಿಲ್ದಾಣಕ್ಕೆ ಸೀಮಿತವಾಗಿರದೆ, ಮೆಟ್ರೋ, ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಸೇವೆಗಳನ್ನು ಒಂದೇ ಸೂರಿನಡಿ ಜೋಡಿಸುವ ಅಂತರಾಷ್ಟ್ರೀಯ ಮಟ್ಟದ ‘ಇಂಟರ್ ಮಾಡೆಲ್ ಟ್ರಾನ್ಸಿಟ್ ಹಬ್’ ಆಗಿ ಅಭಿವೃದ್ಧಿಗೊಳ್ಳಲಿದೆ.

ಸಿಂಗಾಪುರ ಮಾದರಿಯ ಹೈ-ಟೆಕ್ ವ್ಯವಸ್ಥೆ:

ಅಂತರಾಷ್ಟ್ರೀಯ ಬಸ್ ಸ್ಟೇಷನ್ ಮಾಡ್ಯೂಲ್ (ಸಿಂಗಾಪುರ ಮಾದರಿ) ಆಧಾರದ ಮೇಲೆ ಇದನ್ನು ನಿರ್ಮಿಸಲಾಗುವುದು. ಇದರಲ್ಲಿ ಹೈ-ಟೆಕ್ ಬಸ್ ನಿಲ್ದಾಣದೊಂದಿಗೆ ಬಹುಮಹಡಿ ವ್ಯಾಪಾರ ಸಂಕೀರ್ಣಗಳು, ವಿಶಾಲವಾದ ರಿಟೇಲ್ ಶಾಪಿಂಗ್ ಹಬ್‍ಗಳು ಮತ್ತು ಪ್ರಯಾಣಿಕರಿಗೆ ಬೇಕಾದ ಅತ್ಯಾಧುನಿಕ ಜೀವನಶೈಲಿ ಸೌಲಭ್ಯಗಳು ಲಭ್ಯವಿರುತ್ತವೆ.

ಭೂಮಿಯ ಬಳಕೆ ಮತ್ತು ಹಂಚಿಕೆ: ಮೆಜೆಸ್ಟಿಕ್ ಪ್ರದೇಶವು ಒಟ್ಟು 40 ಎಕರೆ ವಿಸ್ತೀರ್ಣವನ್ನು ಹೊಂದಿದ್ದು 08 ಎಕರೆ ಬಿ.ಎಂ.ಆರ್.ಸಿ.ಎಲ್ (ಮೆಟ್ರೋ) ನಿಲ್ದಾಣಕ್ಕಾಗಿ ಮೀಸಲಿಡಲಾಗಿದೆ. 32 ಎಕರೆ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ನಿಲ್ದಾಣಗಳ ಸುಸಜ್ಜಿತ ಮರು ಅಭಿವೃದ್ಧಿ ಬಳಕೆಗೆ ಯೋಜಿಸಲಾಗಿದೆ ಎಂದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವ: ಈ ಬೃಹತ್ ಯೋಜನೆಯನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೈಗೊಳ್ಳಲು ಸರ್ಕಾರವು ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ನೋಂದಾಯಿತ ಟ್ರಾನ್ಸಾಕ್ಷನ್ ಅಡ್ವೈಸರ್ ಆದ M/s. Resurgent India Limited ಅವರನ್ನು ನೇಮಕ ಮಾಡಲಾಗಿದ್ದು, ಅವರು ಈಗಾಗಲೇ ಯೋಜನೆಯ ರೂಪರೇಷೆ ಹಾಗೂ ಟೆಂಡರ್ ಪ್ರಕ್ರಿಯೆಯ ಕಾರ್ಯಗಳನ್ನು ಆರಂಭಿಸಿದ್ದಾರೆ.

ಪ್ರಯಾಣಿಕರ ಸುರಕ್ಷತೆ ಮತ್ತು ಪರ್ಯಾಯ ವ್ಯವಸ್ಥೆ: ಅಭಿವೃದ್ಧಿ ಕಾರ್ಯಗಳು ನಡೆಯುವ ಹಂತದಲ್ಲಿ ಸುಮಾರು ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸರ್ಕಾರವು ಕ್ರಮಕೈಗೊಂಡಿದೆ.

ಬಸ್‍ಗಳ ಸಂಚಾರ: ನಗರದಲ್ಲಿರುವ ಹಾಲಿ ಬಿ.ಎಂ.ಟಿ.ಸಿ ಮತ್ತು ಕೆ.ಎಸ್.ಆರ್.ಟಿ.ಸಿ, ಟಿ.ಟಿ.ಎಂ.ಸಿ ಕೇಂದ್ರಗಳನ್ನು ಬಳಸಿ ಬಸ್‍ಗಳ ಕಾರ್ಯಾಚರಣೆಯನ್ನು ವಿಕೇಂದ್ರೀಕರಿಸಲಾಗುವುದು. ಮೂಲಭೂತ ಸೌಕರ್ಯ: ಕಾಮಗಾರಿ ನಡೆಯುವ ಸಂದರ್ಭದಲ್ಲಿ ತಾತ್ಕಾಲಿಕ ವ್ಯವಸ್ಥೆಯಾಗಿ ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯಗಳು, ಆಸನ ವ್ಯವಸ್ಥೆ ಮತ್ತು ವಿಶೇಷವಾಗಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿಗಳನ್ನು ಒದಗಿಸಲಾಗುವುದು.

ಸುಗಮ ಓಡಾಟ: ಮೆಟ್ರೋ ಮತ್ತು ಬಸ್ ನಿಲ್ದಾಣದ ನಡುವೆ ಪ್ರಯಾಣಿಸುವವರಿಗೆ ಅಡಚಣೆಯಾಗದಂತೆ ಅಗತ್ಯವಿರುವ ಕಡೆಗಳಲ್ಲಿ ಇಳಿಜಾರು, ರೈಲಿಂಗ್ ಹಾಗೂ ಸ್ಕೈ-ವಾಕ್‍ಗಳನ್ನು ಸುರಕ್ಷತಾ ಬೇಲಿಯೊಂದಿಗೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.

ಯೋಜನೆಯ ಪ್ರಗತಿ: ಯೋಜನೆಯ ಇನ್‍ಸೆಪ್ಷನ್ ರಿಪೋರ್ಟ್ ಹಾಗೂ ಕಾನ್ಸೆಪ್ಟ್ ಪ್ಲಾನ್‍ಗಳು ಈಗಾಗಲೇ ಸಿದ್ಧಗೊಂಡಿದ್ದು, ಜನವರಿ 06, 2026 ರಂದು ನಡೆದ ಸಭೆಯಲ್ಲಿ ಇವುಗಳನ್ನು ಪರಿಶೀಲಿಸಲಾಗಿದೆ. 2025-26ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಯನ್ನು ಆದ್ಯತೆಯ ಮೇಲೆ ಪರಿಗಣಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ.

ಈ ಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದಲ್ಲದೆ, ನಗರದ ಹೃದಯಭಾಗಕ್ಕೆ ಆಧುನಿಕ ಮತ್ತು ಸುಂದರ ನೋಟವನ್ನು ನೀಡಲಿದೆ ಎಂದು ಸಚಿವರು ತಿಳಿಸಿದರು.

More articles

Latest article

Most read