ರಾಮಾಯಣದ ಹನುಮಂತನೂ  ಬಿಗ್‌ ಬಾಸ್‌ ಹನುಮಂತನೂ… ಅದೇನು ಸಾಮ್ಯತೆ?

Most read

ಬೆಂಗಳೂರು: ರಾಮಾಯಣದ ಹನುಮಂತನಿಗೆ ತನ್ನ ಶಕ್ತಿಯ ಅರಿವಿರಲಿಲ್ಲವಂತೆ. ಯಾರಾದರೂ ಪ್ರೇರಣೆ ನೀಡಿದರೆ ಮಾತ್ರ ಆಕೆಲಸ ಮಾಡುತ್ತಿದ್ದರಂತೆ. ಸಮುದ್ರವನ್ನು ಯಾರು ಹಾರಿ ಲಂಕೆಗೆ ಹೋಗಬೇಕು ಎಂಬ ಚರ್ಚೆ ನಡೆಯುತ್ತಿದ್ದಾಗ ಯಾರೊಬ್ಬರೂ ಮುಂದೆ ಬರಲಿಲ್ಲ. ಹನುಮಂತನೂ ಮುಂದೆ ಬಂದಿರಲಿಲ್ಲ. ಜತೆಯಲ್ಲಿದ್ದ ಇತರ ಕಪಿಗಳು ನಿನ್ನಲ್ಲಿ ಸಾಮರ್ಥ್ಯ ಇದೆ ಎಂದಾಗ ಹನುಮಂತ ಸಮುದ್ರೋಲ್ಲಂಘನ ಮಾಡಿದ್ದು ಪುರಾಣದ ಕಥೆ.

ಬಿಗ್‌ ಬಾಸ್‌ ನ ಹನುಮಂತನ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಆತನಿಗೂ ತಾನು ಗೆಲ್ಲುವೆ, ತನ್ನಲ್ಲಿ ಆ ಶಕ್ತಿ ಇದೆ ಎಂದು ಅರಿವಿರಲಿಕ್ಕಿಲ್ಲ. ಬಿಗ್‌ಬಾಸ್ ಆರಂಭವಾದ 15 ದಿನಗಳ ನಂತರ ವೈಲ್ಡ್ ಕಾರ್ಡ್ ಮೂಲಕ ಹನುಮಂತನನ್ನು ಟಿಆರ್‌ ಪಿ ಗೋಸ್ಕರ ಕರೆ ತರಲಾಗಿತ್ತು. ಹನುಮಂತನಿಗೆ ಗೊತ್ತಿತ್ತೋ ಇಲ್ಲವೋ ಆದರೆ ಚಾನೆಲ್‌ ಈತನ ಸಾಮರ್ಥ್ಯ ಏನೆಂದು ತಿಳಿದಿತ್ತು. ಹನುಮಂತನ ಪ್ರವೇಶ ಆಗುತ್ತಿದ್ದಂತೆ ಬಿಗ್‌ ಬಾಸ್‌  ಟಿಆರ್‌ ಪಿ ಏರುತ್ತಾ ಹೋಯಿತು. ಕೊನೆಗೆ ಹನುಮಂತ ವಿನ್ನರ್‌ ಆಗಿಯೂ ಬಿಟ್ಟ.

ಹಾಇನ ಬೂತ್‌ ನಿಂದ ಹಿಡಿದು ಮಾಲ್‌, ಐಸ್‌ ಕ್ರೀಂ ಪಾರ್ಲರ್‌ ವರೆಗೆ ಎಲ್ಲಿಯೇ ಹೋದರೂ ಹನುಮಂತನದ್ದೇ ಸುದ್ದಿ. ಆತನ ಸ್ವಾಭಾವಿಕ ಮತು, ಅಂತಃಕರಣ, ಕೃತಿಮತೆ ಇಲ್ಲದ ನಗು ಕುರಿತೇ ಎಲ್ಲರೂ ಮಾತನಾಡುತ್ತಿದ್ದ ದೃಶ್ಯಗಳನ್ನು ನೀವೆಲ್ಲರೂ ನೋಡಿರುತ್ತೀರಿ, ಇಲ್ಲವೇ ಹನುಮಂತನನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುತ್ತೀರಿ. ಒಂದು ರೀತಿ ಸ್ಥಿತಪ್ರಜ್ಞನಂತೆ ಕಂಡು ಬರುತ್ತಿದ್ದ ನಿಷ್ಕಲ್ಮಶದ ಯುವಕ. ಇದೇ ಕಾರಣಕ್ಕೆ ಐದು ಲಕ್ಷಕ್ಕೂ ಹೆಚ್ಚು ಮಂದಿ ವೋಟ್‌ ಮಾಡಿ ಆಯ್ಕೆ ಮಾಡಿರುವುದು ಸುಳ್ಳಲ್ಲ. ಹಳ್ಳಿ ಮಕ್ಕಳು ಬೆಳೀಬೇಕು ಎಂಬ ಮಾತೇ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್‌ ಟ್ಯಾಗ್‌ ಆಗಿ ಹರಿದಾಡುತ್ತಿತ್ತು.

ಟ್ರೋಫಿ ಜಯಿಸಿದ ಬಳಿಕ ಮಾತನಾಡಿದ ಹನುಮಂತ, ದೇವರಾಣೆ ನಾನು ಗೆಲ್ಲುತ್ತೇನೆ ಎಂದು ಬಿಗ್‌ ಬಾಸ್‌ ಮನೆಗೆ ಬಂದಿರಲಿಲ್ಲ. ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ. ನಾನು ಗೆಲ್ತೀನಿ ಅಂತ ಗೊತ್ತಿದ್ದರೆ ಮಾತುಗಳನ್ನು ಬಾಯಿ ಪಾಠ ಮಾಡಿಕೊಂಡು ಬರುತ್ತಿದ್ದೆ. ಆದರೆ ಈಗ ಏನು ಮಾತನಾಡಬೇಕು ಅಂತ ಗೊತ್ತಾಗುತ್ತಿಲ್ಲ. ದೇವರು, ಸುದೀಪ್‌ ಸರ್‌, ಕನ್ನಡ ನಾಡಿನ ಜನರ ಆಶೀರ್ವಾದದಿಂದ ನಾನು ಗೆದ್ದಿದ್ದಿದ್ದೇನೆ ಎಂದು ಭಾವುಕರಾಗದ ಕ್ಷಣ ಮರೆಯಲಾಗದ ಕ್ಷಣವೂ ಹೌದು.  

ಇನ್ನು ತಡರಾತ್ರಿ ತಮ್ಮ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹನುಮಂತ, ಎಲ್ಲ ನಮ್ಮ ಪ್ರೀತಿಯ ಕನ್ನಡ ಜನತೆಗೆ ನಮಸ್ಕಾರ. ಇದೊಂದು ಮಹತ್ವದ ಕ್ಷಣ. ಮೊದಲು ಈ ವಿಶೇಷ ಟ್ರೋಫಿಯನ್ನು ನನ್ನದಾಗಿಸಿದ ಎಲ್ಲಾ ನನ್ನ ಪ್ರೀತಿಯ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಬೆಂಬಲ ಮತ್ತು ಪ್ರೀತಿಯಿಲ್ಲದೆ ನಾನು ಟ್ರೋಫಿಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಗೆಲುವು ನಿಮ್ಮ ಪ್ರೀತಿ, ಬೆಂಬಲ ಮತ್ತು ವಿಶ್ವಾಸದ ಫಲ. ಈ ಟ್ರೋಫಿ ನನ್ನದಲ್ಲ ನಿಮ್ಮೆಲ್ಲರದ್ದು. ನನಗೆ ಸದಾ ಪ್ರೇರಣೆ ನೀಡಿದ ಪ್ರತಿ ಹೃದಯಕ್ಕೂ ಹೃತ್ಪೂರ್ವಕ ಧನ್ಯವಾದಗಳು ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

More articles

Latest article