ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ನಿಮಿಷವೂ ಬ್ರೇಕ್ ತೆಗೆದುಕೊಳ್ಳದೆ, ನೀರೂ ಕುಡಿಯದೇ ನಿರಂತರವಾಗಿ 3 ಗಂಟೆ 5 ನಿಮಿಷ ಗಂಟೆಗಳ ಕಾಲ ಬಜೆಟ್ ಭಾಷಣ ಮಾಡಿದರು. ಇದು ಪ್ರತಿಯೊಬ್ಬರಲ್ಲೂ ಅಚ್ಚರಿ ಮೂಡಿಸಿತು.
ಸಿಎಂ ಗೆ ಕಾಲು ನೋವು ಇರುವ ಕಾರಣ ಬಜೆಟ್ ಮಧ್ಯೆ ಕೆಲವರು ಕುಳಿತುಕೊಂಡು ಓದಿ ಎಂದು ಸಲಹೆ ನೀಡಿದರು. ಆದರೆ, ಸಿದ್ದರಾಮಯ್ಯ ಸಾಧ್ಯವಾದಷ್ಟು ನಿಂತುಕೊಂಡೇ ಓದುತ್ತೇನೆ. ಕಷ್ಟವಾದಾಗ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದರು.
ಆದರೆ, ಕುಳಿತುಕೊಳ್ಳದ, ವಿಶ್ರಾಂತಿ ಪಡೆಯದ ಸಿಎಂ ತಮ್ಮ ದಾಖಲೆಯ 17ನೇ ಬಜೆಟ್ ಅನ್ನು ಸುಮಾರು 3 ಗಂಟೆ 5 ನಿಮಿಷಗಳ ಕಾಲ ಮಂಡಿಸಿದರು. 532 ಪ್ರಮುಖಾಂಶಗಳನ್ನು ಸತತವಾಗಿ ಓದಿ ಮುಗಿಸಿದರು.
ಬಳಿಕ ಸಂಪುಟ ಸಹೋದ್ಯೋಗಿಗಳ ಜೊತೆ ಫೋಟೋ ತೆಗೆಸಿಕೊಂಡರು. ಇದಾದ ಬಳಿಕ ಬಜೆಟ್ ಮೇಲಿನ ಚರ್ಚೆಯನ್ನು ಸೋಮವಾರಕ್ಕೆ ನಿಗದಿಪಡಿಸಲಾಯಿತು.
ಸಿದ್ದು ಬಜೆಟ್ ಮಂಡಿಸಿದ್ದು 3 ಗಂಟೆ 5 ನಿಮಿಷ
ಬಜೆಟ್ ಮೇಲಿನ ಚರ್ಚೆಯನ್ನು ಸೋಮವಾರಕ್ಕೆ ನಿಗದಿ