Friday, March 6, 2026

2026-27ನೇ ಬಜೆಟ್‌ ಹೈಲೈಟ್ಸ್‌

22,957 ಕೋಟಿ ಕೊರತೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : 17ನೇ ದಾಖಲೆಯ 2026-27ನೇ ಸಾಲಿನ ಬಜೆಟ್‌ ಮಂಡಿಸಲು ಆರಂಭಿಸಿದ್ದಾರೆ ಸಿದ್ದರಾಮಯ್ಯ.

ಪ್ರಮುಖಾಂಶಗಳು : 2026-27 ಹಣಕಾಸು ವರ್ಷದಲ್ಲಿ ಬಜೆಟ್ ಗಾತ್ರ 4,48,004 ಆಗಿರುತ್ತದೆ. ಈ ಬಾರಿ 1,32,190 ಕೋಟಿ ಸಾಲ ಪಡೆಯಲು ತೀರ್ಮಾನ. ಈ ಆರ್ಥಿಕ ವರ್ಷದಲ್ಲಿ ರಾಜ್ಯದ ಸಾಲ 8,24,389 ಕೋಟಿ ರೂ. ಅಂದಾಜು ಎಂದು ಬಜೆಟ್ ನಲ್ಲೇ ಉಲ್ಲೇಖ ರಾಜ್ಯದ ಜಿಎಸ್‌ಡಿಪಿ ಶೇ. 24.94 ರಷ್ಟಾಗಲಿದೆ. ಈ ವರ್ಷ 56,432 ಖಾಲಿ ಹುದ್ದೆಗಳನ್ನ ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ, 5 ವರ್ಷ ವಯೋಮಿತಿ ಸಡಿಲಿಕೆ.

2026-27 ನೇ ಸಾಲಿನಲ್ಲಿ ಅರಣ್ಯ ಇಲಾಖೆಯಲ್ಲಿ 2 ಸಾವಿರ ಹುದ್ದೆಗಳನ್ನ ಭರ್ತಿ ಮಾಡಲು ತೀರ್ಮಾನ. ರಾಜ್ಯದ ಎಲ್ಲಾ ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ AI, facial recognition ಮುಖಾಂತರ ಹಾಜರಾತಿ ಕಡ್ಡಾಯಗೊಳಿಸಲಾಗಿದೆ.

ಎಲ್ಲೆಲ್ಲಿಂದ ಆದಾಯ ನಿರೀಕ್ಷೆ..?

ಮೋಟಾರು ವಾಹನ ತೆರಿಗೆ – 15,500 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ – 29000 ಕೋಟಿ ರೂ., ರಾಜ್ಯ ಅಬಕಾರಿ – 45,000 ಕೋಟಿ ರೂ., ವಾಣಿಜ್ಯ ತೆರಿಗೆ – 1,25,000 ಕೋಟಿ ರೂ. ಹಾಗೂ ಇತೆರೆ – 5500 ಕೋಟಿ ರೂ. ಸಂಗ್ರಹವಾಗಲಿದೆ.

ಈ ಬಾರಿ 1,32,190 ಕೋಟಿ ಸಾಲ ಪಡೆಯಲು ತೀರ್ಮಾನ
ಕೇಂದ್ರ ಸರ್ಕಾರದಿಂದ ಸಾಲ – 6810 ಕೋಟಿ ರೂ., ಬಹಿರಂಗ ಮಾರುಕಟ್ಟೆ ಸಾಲ – 1,22,340 ಕೋಟಿ ರೂ., LIC / NSSF / NCDC ಮತ್ತು RIDF ಗಳಿಂದ ಸಾಲ – 2850 ಕೋಟಿ ರೂ., ವಿವಿಧ ಬಂಡವಾಳ ಜಮೆ – 23 ಕೋಟಿ ರೂ., ಸಾಲಗಳು ಮುಂಗಡ ವಸೂಲಿ – 167 ಕೋಟಿ ರೂ., ಒಟ್ಟಾರೆ 1,32,190 ಕೋಟಿ ರೂ. ಸಾಲ ಪಡೆಯಲು ತೀರ್ಮಾನಿಸಲಾಗಿದೆ.

ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ..?

ಶಿಕ್ಷಣ – 47,224 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ – 34929 ಕೋಟಿ ರೂ., ಇಂಧನ – 29947 ಕೋಟಿ ರೂ., ಆರ್‌ಡಿಪಿಆರ್‌ – 26559 ಕೋಟಿ ರೂ., ನೀರಾವರಿ – 22436 ಕೋಟಿ ರೂ., ನಗರಾಭಿವೃದ್ಧಿ ಮತ್ತು ವಸತಿ – 22203 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ – 23100 ಕೋಟಿ ರೂ., ಆರೋಗ್ಯ – 17817 ಕೋಟಿ ರೂ., ಕಂದಾಯ – 19843 ಕೋಟಿ ರೂ., ಸಮಾಜ ಕಲ್ಯಾಣ – 18,612 ಕೋಟಿ ರೂ., ಲೋಕೋಪಯೋಗಿ – 11,424 ಕೋಟಿ ರೂ., ಆಹಾರ – 7942 ಕೋಟಿ ರೂ., ಕೃಷಿ – 8373 ಕೋಟಿ ರೂ., ಪಶುಸಂಗೋಪನೆ ಮತ್ತು ಮೀನುಗಾರಿಕೆ – 4084 ಕೋಟಿ ರೂ., ಇತರೆ – 1,72,757 ಕೋಟಿ ರೂ. ಅನುದಾನ ನೀಡಲಾಗಿದೆ.

VB G RAM G ಬಿಲ್ ತಿರುಗೇಟು ಕೊಟ್ಟ ರಾಜ್ಯ ಸರ್ಕಾರ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ನಾಮಕರಣ ಮಾಡುವ ಘೋಷಣೆ.

ಬೆಂಗಳೂರಿನಲ್ಲಿ ಸೆರೆಹಿಡಿಯಲ್ಪಟ್ಟ ಚಿರತೆಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ 5 ಕೋಟಿ ವೆಚ್ಚದಲ್ಲಿ ಕೇಂದ್ರ ಸ್ಥಾಪನೆ.

ರಾಜ್ಯದಿಂದ ಶ್ರೀ ಮಾತಾ ವೈಷ್ಣೋದೇವಿ ಯಾತ್ರೆಗೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5 ಸಾವಿರ ಸಹಾಯಧನ. 41 ಕಿ.ಮೀ ಹೆಚ್ಚುವರಿ ಮೆಟ್ರೋ ಮಾರ್ಗ, ಅಗ್ನಿಶಾಮಕ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಆಹಾರ ಭತ್ಯೆ 150 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಳ. ಕಲಬುರಗಿ ನಗರಕ್ಕೆ 24/7 ಶಾಶ್ವತ ನೀರು ನೀರು ಒದಗಿಸಲು 1863 ಕೋಟಿ ರೂ., ಕಾಮಗಾರಿ, ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರ ವರ್ತುಲ ರಸ್ತೆ ಅಭಿವೃದ್ಧಿಗೆ 450 ಕೋಟಿ ರೂ., ರಾಜಕಾಲುವೆ ಮೇಲ್ದರ್ಜೆಗೇರಿಸಲು 273 ಕೋಟಿ ರೂ., 175 ಜಂಕ್ಷನ್ ಸೌಂದರ್ಯಿಕರಣ, 100 ಸ್ಕೈ ವಾಕ್‌ ಗಳ ನಿರ್ಮಾಣ, 500 ಕಿ.ಮೀ ಪಾದಚಾರಿ ಮಾರ್ಗ ಮೇಲ್ದರ್ಜೆಗೆ, ಜಿಬಿಎ 5 ನಗರ ಪಾಲಿಕೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 1,255 ಕೋಟಿ ರೂ., 158 ಕಿ.ಮೀ ಉದ್ದದ ವೈಟ್ ಟಾಪಿಂಗ್ ಗೆ 1,700 ಕೋಟಿ ರೂ., ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿಗೆ 1936 ಕೋಟಿ ರೂ.,

ರಾಜ್ಯದಲ್ಲಿ ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ತೀರ್ಮಾನಿಸಲಾಗಿದೆ. Zero Tolerance to drugs ಧ್ಯೇಯದೊಂದಿಗೆ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಘಟಕವನ್ನು 10 ಕೋಟಿ ರೂ. ವೆಚ್ಚದಲ್ಲಿ ಬಲಪಡಿಸಲಾಗುವುದು.

ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : 2025-26 ನೇ ಸಾಲಿನ ಫೆಬ್ರವರಿ ಅಂತ್ಯಕ್ಕೆ ಮೋಟಾರು ವಾಹನ ತೆರಿಗೆಯಿಂದು ಒಟ್ಟು 11,630 ಕೋಟಿ ರಾಜಸ್ವ ಸ್ವೀಕೃತ , ಕಳೆದ ಸಾಲಿಗೆ ಹೋಲಿಸಿದ್ರೆ ಶೇ.8.5 ರಷ್ಟು ಬೆಳವಣಿಗೆ, 2026-27 ನೇ ಸಾಲಿನಲ್ಲಿ ಸಾರಿಗೆ ಇಲಾಖೆಗೆ 15,500 ಕೋಟು ತೆರಿಗೆ ಸಂಗ್ರಹ ಗುರಿ.

1/4/25 ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ, ವೇತನ ಬಾಕಿ ಪಾವತಿಗಾಗಿ 1271 ಕೋಟಿ ರೂ. ನೀಡಲು ತೀರ್ಮಾನ. 2026-27 ನೇ ಸಾಲಿನಲ್ಲಿ 1000 ಡಿಸೇಲ್ ಬಸ್ಸುಗಳ ಖರೀದಿ, 4000 ಇವಿ ಬಸ್ಸುಗಳ ಖರೀದಿ, 32 ಬಿಎಂಟಿಸಿ ಹಾಗೂ 62 ಇರತೆ ರಸ್ತೆ ಸಾರಿಗೆ ನಿಗಮಗಳ EV ಡಿಪೋಗಳ ಅಭಿವೃದ್ಧಿಗೊಳಿಸಲು ತೀರ್ಮಾನ.

ಕೃಷ್ಣಾ ಮೇಲ್ದಂಡೆ ಯೋಜನೆ : ಭೂಸ್ವಾಧೀನ ಪ್ರಕ್ರಿಯೆ ದರ ಪರಿಷ್ಕರಣೆ, ಖುಷ್ಕಿ ಜಮೀನಿಗೆ ಎಕರೆಗೆ 30 ಲಕ್ಷ, ತರಿ ಜಮೀನಿಗೆ ಎಕರೆಗೆ 40 ಲಕ್ಷ ರೂ.

ಅಬಕಾರಿ ಹೊಸ ನೀತಿ ಜಾರಿ : ಮದ್ಯದ ದರ ನಿಗದಿ ಮಾಡುವ ಜವಾಬ್ದಾರಿ ಉತ್ಪಾದಕರಿಗೆ. 2025-26 ನೇ ಸಾಲಿನಲ್ಲಿ ಫೆಬ್ರವರಿ ತಿಂಗಳವರೆಗೆ ಒಟ್ಟು 22,629 ಕೋಟಿ ರೂ. ರಾಜಸ್ವ ಸ್ವೀಕೃತ, ಕಳೆದ ಸಾಲಿಗೆ ಹೋಲಿಸಿದರೆ 12.3 ರಷ್ಟು ಬೆಳವಣಿಗೆ 2026-27 ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 29,000 ಕೋಟಿ ರೂ. ರಾಜಸ್ವ ಗುರಿ ನಿಗದಿ.

ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಬೆಳಗಾವಿ ಜಿಲ್ಲೆಯ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ.

ರಾಜ್ಯದ ಏಳು ದೇಶೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಪ್ರಸಕ್ತ ಸಾಲಿಗೆ 200 ಕೋಟಿ ರೂ.

ಕಾರ್ಮಿಕ ಇಲಾಖೆಯಿಂದ ಹುಬ್ಬಳ್ಳಿ, ಇಂದಿರಾನಗರ, ಮೈಸೂರು ಮತ್ತು ದೊಡ್ಡಬಳ್ಳಾಪುರ ಪ್ಯಾರಾ ಮೆಡಿಕಲ್ ಕೋರ್ಸ್ ಹಾಗೂ ಇಂದಿರಾನಗರದಲ್ಲಿ 3 ವರ್ಷದ PG (DNB) ಕೋರ್ಸ್ ಪ್ರಾರಂಭಿಸಲಾಗುವುದು.

ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ 6,000 ರೂ.ಗಳ ಮಾಸಿಕ ಗೌರವಧನ.

ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ : ಮಕ್ಕಳ ಸೋಶಿಯಲ್ ಮೀಡಿಯಾ ಬಳಕೆಗೆ ಕಡಿವಾಣ ಹಾಕಲು ಪ್ರಸ್ತಾಪ ಮೊಬೈಲ್ ಬಳಕೆಯಿಂದಾಗುವ ಅಡ್ಡ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ. 16 ವರ್ಷದೊಳಿಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ. ಹೆಚ್ಚುತ್ತಿರೋ ಮೊಬೈಲ್ ಬಳಕೆ ಹಿನ್ನಲೆ ಬಜೆಟನಲ್ಲಿ ನಿಷೇಧದ ಪ್ರಸ್ತಾಪ.

ಆಹಾರ ಇಲಾಖೆಯಿಂದ 2026-27 ನೇ ಸಾಲಿನಲ್ಲಿ ಇಂದಿರಾ ಆಹಾರ ಕಿಟ್ ವಿತರಣೆ. ಇಂದಿರಾ ಆಹಾರ ಕಿಟ್ ಗಾಗಿ 6,200 ಕೋಟಿ ರೂ. ಬಜೆಟ್ ನಲ್ಲಿ ಮೀಸಲು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ವಿವಿಧ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 100 ಕೋಟಿ ರೂ.

ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಯ ಬಗ್ಗೆ ಘೋಷಣೆ. ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ ಸಿದ್ದಿ ಮತ್ತು ಇತರೆ ಸೂಕ್ಷ್ಮ ಪರಿಶಿಷ್ಟ ಪಂಗಡದ pvtg ಗಳಿಗಾಗಿ ನಿಗಮ ಸ್ಥಾಪನೆ.

ಬೆಂಗಳೂರಿನಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರ

ಆರೋಗ್ಯ ಕ್ಷೇತ್ರದಲ್ಲೂ ಹಲವು ಘೋಷಣೆಗಳನ್ನು ಮಾಡಲಾಗಿದೆ. ಬೆಂಗಳೂರಿನಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಇದೇ ವೇಳೆ ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್, ಕೊಪ್ಪಳ, ಚಿತ್ರದುರ್ಗ, ಮಂಡ್ಯ, ಭದ್ರಾವತಿ ಮತ್ತು ಕೆಜಿಎಫ್ ಪ್ರದೇಶಗಳಲ್ಲಿನ ಇಎಸ್ಐ ಆಸ್ಪತ್ರೆಗಳನ್ನು ಉನ್ನತೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

83 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ
40 ಲಕ್ಷ ರೈತರಿಗೆ 468 ಕೋಟಿ ರೂ. ಮೊತ್ತದಲ್ಲಿ ಬಿತ್ತನೆ ಬೀಜಗಳಿಗೆ ಸಹಾಯಧನ ವಿತರಣೆ. 363 ಕೋಟಿ ರೂ. ಮೊತ್ತದಲ್ಲಿ 32,138 ಕೃಷಿ ಹೊಂಡಗಳ ನಿರ್ಮಾಣ. 51 ಲಕ್ಷ ರೈತರಿಗೆ 6,213 ಕೋಟಿ ಬೆಳೆ ವಿಮೆ ಪರಿಹಾರ. 36 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗೆ 48,000 ಕೋಟಿ ರೂ. ಉಚಿತ ವಿದ್ಯುತ್‌ ಸಹಾಯಧನ. 83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 70 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಣೆ.

ಗ್ರಾಮೀಣ ರೈತರಿಗೆ ಸ್ಥಿರ ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಸೃಜಿಸುವ ಉದ್ದೇಶದಿಂದ ʻಮುಖ್ಯಮಂತ್ರಿ ಕೃಷಿ ವಿಸ್ತಾರʼ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

ತೊರವಿಯಲ್ಲಿ ಶೀತಲಗೃಹ ಸ್ಥಾಪನೆ : ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಮತ್ತು ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಒಟ್ಟು 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಶೀತಲಗೃಹಗಳನ್ನು 64 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಶೀತಲಗೃಹಗಳನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು.

ಲಿಂಗಾಂಬುಧಿ ಸಸ್ಯ ತೋಟ ಅಭಿವೃದ್ಧಿ : ಹೆಚ್ಚಿನ ಪ್ರವಾಸಿಗರನ್ನು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಮೈಸೂರಿನ ಲಿಂಗಾಂಬುಧಿ ಸಸ್ಯ ತೋಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.

ಸಿಲ್ಕ್‌ ಪಾರ್ಕ್‌ಗಳ ಸ್ಥಾಪನೆ : ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ (ಮೈಸೂರು) ಹಾಗೂ ಕಲಬುರಗಿಯಲ್ಲಿ ಸಿಲ್ಕ್‌ ಪಾರ್ಕ್‌ಗಳ ಸ್ಥಾಪನೆಗೆ ಕ್ರಮ.

2026-27ನೇ ಸಾಲಿನಲ್ಲಿ ನಬಾರ್ಡ್‌ ಸಹಯೋಗದೊಂದಿಗೆ ಹೊಸದಾಗಿ 300 ಪಶುವೈದ್ಯ ಸಂಸ್ಥೆಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ.

ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25 ರಷ್ಟು ಸಹಾಯಧನದಲ್ಲಿ ಹಸು/ಎಮ್ಮೆ ಖರೀದಿಸಲು ಪ್ರೋತ್ಸಾಹಧನ ನೀಡಲಾಗುವುದು.

ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ಹಾಗೂ ಬೀದರ್‌ನ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶು ಆಸ್ಪತ್ರೆಗಳಲ್ಲಿ ಜಾನುವಾರುಗಳ ಸಿ.ಟಿ. ಸ್ಕ್ಯಾನಿಂಗ್‌ ಕೇಂದ್ರಗಳ ಸ್ಥಾಪನೆ.

ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರೋಪಾಯವಾಗಿ ಸಂತಾನಹರಣ ನಿಯಂತ್ರಣಕ್ಕಾಗಿ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ತರಬೇತಿಯನ್ನು ನೀಡಲು ಬೆಂಗಳೂರು ಹಾಗೂ ಬೀದರ್‌ ನಲ್ಲಿ ʻಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರʼವನ್ನು ಸ್ಥಾಪಿಸಲಾಗುವುದು.

ಸಮುದ್ರ ಕೃಷಿಯನ್ನು ಪ್ರೋತ್ಸಾಹಿಸಲು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ Centre of Excellence ಸ್ಥಾಪನೆ.

ನಬಾರ್ಡ್‌ ಸಂಸ್ಥೆಯ ಸಲಹೆಯಂತೆ ಪ್ರತಿ ಜಿಲ್ಲೆಯಲ್ಲಿ ʻಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ʼ ಸ್ಥಾಪಿಸಲು RBI ಗೆ ಪ್ರಸ್ತಾವನೆ ಸಲ್ಲಿಕೆ.

More articles

Latest article

Most read