ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಲಿದ್ದಾರೆ. ಅದಕ್ಕೂ ಮುನ್ನ ಶಿವರಾಜ್ಕುಮಾರ್ ದಂಪತಿಗಳು ಮುಡಿ ಕೊಟ್ಟಿದ್ದಾರೆ. ಮುಡಿ ಕೊಟ್ಟಿರುವ ಫೋಟೋಗಳು ವೈರಲ್ ಆಗಿದ್ದು ಅಚ್ಚರಿ ಮೂಡಿಸಿವೆ. ಶಿವಣ್ಣ ಅವರ ಇಡೀ ಕುಟುಂಬ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಚಿಕಿತ್ಸೆಯ ಯಶಸ್ಸಿಗೆ ಪ್ರಾರ್ಥಿಸಿದೆ.
ಈವರೆಗೆ ತಮ್ಮ ಕೈಲಿದ್ದ ಎಲ್ಲ ಸಿನಿಮಾಗಳನ್ನು ಶಿವರಾಜ್ಕುಮಾರ್ ಪೂರ್ಣಗೊಳಿಸಿದ್ದಾರೆ. ಇವರ ಅನಾರೋಗ್ಯ.ಕ್ಕೆ ಕಾರಣ ಏನೆಂದು ಇದುವರೆಗೂ ತಿಳಿದು ಬಂದಿಲ್ಲ. ಆದರೆ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿರುವುದಂತೂ ಸತ್ಯ. ನಟನೆಯಿಂದ ಅಲ್ಪ ಅವಧಿಗೆ ದೂರ ಉಳಿಯಲು ನಿರ್ಧರಿಸಿದ್ದಾರೆ. ಸಂಪೂರ್ಣ ಚೇತರಿಕೆ ಕಂಡ ಬಳಿಕವೇ ನಟನೆಯತ್ತ ಗಮನ ಹರಿಸಲಿದ್ದಾರೆ. ಶಿವಣ್ಣನ ಲುಕ್ ನೋಡಿ ಅನೇಕರು ಅಚ್ಚರಿ ಪಟ್ಟಿದ್ದಾರೆ ಮತ್ತು ಶುಭ ಹಾರೈಸಿದ್ದಾರೆ.
ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಇತ್ತೀಚೆಗೆ ಬಿಡುಗಡೆಯಾಗಿದ್ದು ಭರ್ಜರಿ ಯಶಸ್ಸು ಕಂಡಿದೆ. ಈಗ ಅವರು ನಟಿಸಿರುವ ‘45’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರವೇ ಈ ಸಿನಿಮಾ ಕೂಡಾ ತೆರೆ ಕಾಣಲಿದೆ.