ಮಹಿಳೆಯರಿಗೆ ಒಮ್ಮೊಮ್ಮೆ ಕೆಲವು ಕಾಯಿಲೆಗಳು ಸುಳಿವನ್ನೇ ನೀಡದೆ ಬಂದು ಬಿಡುತ್ತವೆ. ಗುಣಲಕ್ಷಣಗಳು ಕಂಡರೂ, ಅವುಗಳನ್ನು ನಾವು ನಿರ್ಲಕ್ಷ್ಯ ಮಾಡ್ತೇವೆ. ಅದು ಅತಿರೇಕಕ್ಕೆ ಹೋದಾಗ ಪ್ರಾಣಕ್ಕೇನೆ ಅಪಾಯ ತಂದಿಡುತ್ತದೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿಯ ತಂಗಿ ಶಮಿತಾ ಶೆಟ್ಟಿ.
ಎಸ್. ಶಮಿತಾ ಶೆಟ್ಟಿ ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಹೆಣ್ಣು ಮಕ್ಕಳಿಗೆ ಕಿವಿಮಾತನ್ನು ಹೇಳಿದ್ದಾರೆ. ಮೇಲ್ನೋಟದ ಆರೋಗ್ಯಕ್ಕಿಂತ ಹೆಣ್ಣು ಮಕ್ಕಳು ಆಗಾಗ ವೈಯಕ್ತಿಕವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ. ಹಾಗಾದ್ರೆ ಶಮಿತಾ ಶೆಟ್ಟಿಗೆ ಅಂಥದ್ದೇನಾಯ್ತು. ಅವರು ಯಾವ ಕಾಯಿಲೆಗೆ ತುತ್ತಾಗಿದ್ದಾರೆ. ಆ ಎಲ್ಲಾ ಮಾಹಿತಿ ಇಲ್ಲಿದೆ.
ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ಶಮಿತಾ ಶೆಟ್ಟಿಯವರನ್ನು ಏನು ಆಯಿತು ಎಂದು ಶಿಲ್ಪಾ ಶೆಟ್ಟಿ ಕೇಳಿದಾಗ, ನಾನು ಎಂಡೋಮೆಟ್ರಿಯೋಸಿಸ್ ನೊಂದಿಗೆ ಹೋರಾಡುತ್ತಿದ್ದೇನೆ. ಹೆಚ್ಚಿನ ಮಹಿಳೆಯರಲ್ಲಿ ಈ ಕಾಯಿಲೆ ಇರುತ್ತದೆ. ಆದರೆ ಇದರ ಕುರಿತು ಎಚ್ಚರಿಕೆ ವಹಿಸದೆ ಇರುತ್ತಾರೆ. ಎಲ್ಲರೂ ಆಗಾಗ ತಪಾಸಣೆ ಮಾಡುವ ಮೂಲಕ ಇಂತಹ ರೋಗಗಳ ಕುರಿತು ಜಾಗೃತಿ ವಹಿಸಿ ಎಂದಿದ್ದಾರೆ.
ಈ ವಿಡಿಯೋ ನೋಡುತ್ತಿರುವ ಎಲ್ಲಾ ಮಹಿಳೆಯರೇ ದಯವಿಟ್ಟು ಎಂಡೋಮೆಟ್ರಿಯೋಸಿಸ್ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿ ಆ ಕಾಯಿಲೆ ಬಗ್ಗೆ ತಿಳಿದುಕೊಳ್ಳಿ. ಏಕೆಂದರೆ, ಆ ಕಾಯಿಲೆ ನಿಮ್ಮಲ್ಲಿಯೂ ಇರಬಹುದು. ನೀವು ಈ ಕಾಯಿಲೆ ಹೊಂದದೆಯೂ ಇರಬಹುದು. ಆದರೆ ಈ ರೋಗಲಕ್ಷಣಗಳು ಇವೆಯೇ ಎಂದು ತಿಳಿಯಲು ಗೂಗಲ್ ನಲ್ಲಿ ಹುಡುಕಿ. ಇದು ತುಂಬಾ ನೋವಿನಿಂದ ಕೂಡಿದ್ದು, ಅಹಿತಕರವಾಗಿದೆ. ಈ ಕಾರಣಕ್ಕಾಗಿಯೇ ನಿಮ್ಮ ದೇಹದಲ್ಲೂ ನೋವು ಆಗುತ್ತಿರಬಹುದು ಎಂದು ವಿಡಿಯೋ ಮೂಲಕ ಹೇಳಿದ್ದಾರೆ.
ಏನಿದು ಎಂಡೋಮೆಟ್ರಿಯೋಸಿಸ್..?
ಎಂಡೊಮೆಟ್ರಿಯೊಸಿಸ್ ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಈ ಕಾಯಿಲೆಯಿಂದ ಸೊಂಟದಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಜೊತೆಗೆ ಗರ್ಭಿಣಿಯಾಗಲು ಮಹಿಳೆಯರಿಗೆ ಕಷ್ಟವಾಗುತ್ತದೆ. ಎಂಡೊಮೆಟ್ರಿಯೊಸಿಸ್ಗೆ ತುತ್ತಾದ ಮಹಿಳೆಯರ ಮೊದಲ ಮುಟ್ಟಿನ ಅವಧಿಯಲ್ಲಿ ಪ್ರಾರಂಭವಾಗಬಹುದು ಅದು ಋತುಬಂಧದವರೆಗೆ ಇರುತ್ತದೆ.