ಯುವಕನ ಮೇಲೆ ಕಾಮತೀಟೆ: ದೇವೇಗೌಡರ ಮತ್ತೊಬ್ಬ ಮೊಮ್ಮೊಗ ಸೂರಜ್ ರೇವಣ್ಣ ಬಂಧನ

ಹಾಸನ: ಯುವಕನೋರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ.

ಸೂರಜ್ ರೇವಣ್ಣ ಅವರನ್ನು ಇಂದು ಭಾನುವಾರವಾದ್ದರಿಂದ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ. ಸಕಲೇಶಪುರ ವಲಯದ ಡಿವೈಎಸ್ ಪಿ ಪ್ರಮೋದ್ ನಿನ್ನೆ ಆರೋಪಿ ಸೂರಜ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ಜೆಡಿಎಸ್ ಪಕ್ಷದ ಯುವ ಕಾರ್ಯಕರ್ತನೋರ್ವ ತನ್ನ ಮೇಲೆ ಸೂರಜ್ ರೇವಣ್ಣ ಕಳೆದ ಭಾನುವಾರ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದ. ಈ ದೂರಿನ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಾರಿಗಳಿಗೆ ನಿರ್ದೇಶಿಸಿದ್ದರು.

ನಿನ್ನೆ ಸಂತ್ರಸ್ತ ಯುವಕ ಖುದ್ದಾಗಿ ಹಾಜರಾರಿ ಪೊಲೀಸರ ಮುಂದೆ ದೂರು ದಾಖಲಿಸಿದ್ದ. ಈ ನಡುವೆ ಸಂತ್ರಸ್ಥ ಯುವಕ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಸೂರಜ್ ರೇವಣ್ಣ ತನ್ನ ಸಹಾಯಕನ ಮೂಲಕ ದೂರೊಂದನ್ನು ದಾಖಲಿಸಿದ್ದು, ಆ ಪ್ರಕರಣದಲ್ಲೂ ಎಫ್ ಐ ಆರ್ ಮಾಡಲಾಗಿದೆ.

ಹಾಸನ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿರುವಾಗಲೇ ಆತನ ಅಣ್ಣ ಸೂರಜ್ ರೇವಣ್ಣ ಮತ್ತೊಂದು ಬಗೆಯ ಲೈಂಗಿಕ ಹಗರಣದಲ್ಲಿ ಸಿಲುಕಿ ಬಂಧಿತನಾಗಿದ್ದಾನೆ.

More articles

Latest article

Most read