ಬೆಂಗಳೂರು: ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಮೇಲೆ ಗಂಭೀರವಾದ ಆಪಾದನೆಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಸಲ್ಲಿಸಿ ಸ್ವಾಮಿ ಮಂಜುನಾಥನಿಗೆ ಸೇರಿದ ಟ್ರಸ್ಟ್ ಹಾಗೂ ಆಸ್ತಿ-ಪಾಸ್ತಿಗಳನ್ನು ಸರ್ಕಾರಕ್ಕೆ ಬಿಟ್ಟು ಕೊಡುವಂತೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ವಕೀಲ ವೀರೇಂದ್ರಬಾಬು ನಂಜೇಗೌಡ ಅವರು ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರು ಹೆಗ್ಗಡೆ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಗಳಾದ ತಮ್ಮ ಮತ್ತು ತಮ್ಮ ಕುಟುಂಬದ ಬಗ್ಗೆ ತುಂಬಾ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ವಿಶೇಷ ವಾಗಿ ಕು.ಸೌಜನ್ಯ ಹತ್ಯೆಗೆ ಅಪರಾಧಿಗಳು ಯಾರು ಎನ್ನುವುದು ತಿಳಿಯದೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ತಮ್ಮ ಕುಟುಂಬ ಹಿಂದೂ ಧರ್ಮಕ್ಕೆ ಸೇರಿಲ್ಲ. ತಮ್ಮ ಕುಟುಂಬವು ಹಲವಾರು ಆರ್ಥಿಕ ಹಗರಣಗಳಲ್ಲಿ ಥಳುಕು ಹಾಕಿಕೊಂಡಿದೆ. ಅಂತಿಮವಾಗಿ ಇತ್ತೀಚಿಗೆ ಅನಾಮಿಕ ವ್ಯಕ್ತಿಯೊಬ್ಬ ತಮ್ಮ ಕುಟುಂಬದ ಸದಸ್ಯರ ನಿರ್ದೇಶನದಂತೆ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳುತ್ತಿದ್ದಾನೆ. ಈ ಎಲ್ಲಾ ಆರೋಪಗಳಿಗೆ ಸದ್ಯದಲ್ಲಿ ತಾರ್ಕಿಕ ಅಂತ್ಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ
ನಾವು ಆರಾಧಿಸುವ ಶ್ರೀ ಮಂಜುನಾಥ ಸ್ವಾಮಿಯ ಕರ್ನಾಟಕದ ಕನ್ನಡಿಗರ ಆರಾಧ್ಯ ದೈವ ಈ ಅಪಾದನೆಗಳಿಂದ ನೆರವಾಗಿ ಅಥವಾ ಪರೋಕ್ಷವಾಗಿ ಧರ್ಮಸ್ಥಳ ಮತ್ತು ಸ್ವಾಮಿ ಮಂಜುನಾಥನ ಪಾವಿತ್ರ್ಯತೆ ಮತ್ತು ನಂಬಿಕೆಗಳಿಗೆ ಧಕ್ಕೆಯಾಗುತ್ತಿದ್ದು ಸ್ವಾಮಿ ಶ್ರೀ ಮಂಜುನಾಥನ ಭಕ್ಷರಾದ ನಮಗೆ ತುಂಬಾ ನೋವುಂಟು ಮಾಡುತ್ತಿದೆ. ಅಂತಹ ಪವಿತ್ರ ದೇವಾಲಯದ ಆಡಳಿತವು ಇಂತಹ ಗಂಭೀರ ಅವಾದನೆಗಳನ್ನು ಎದುರಿಸುತ್ತಿರುವ ತಮ್ಮ ಮತ್ತು ತಮ್ಮ ಕುಟುಂಬದ ಅಧೀನದಲ್ಲಿರುವುದು ಯಾವುದೇ ರೀತಿಯಿಂದಲೂ ನ್ಯಾಯ ಸಾಧುವಲ್ಲ. ಸ್ವಾಮಿ ಮಂಜುನಾಥನ ದೇವಾಲಯವು ಕೋಟ್ಯಂತರ ಭಕ್ತರ ಸ್ವತ್ತು. ಇಂತಹ ಗಂಭೀರ ಅಪಾದನೆಗಳು ನಿಜವೋ ಸುಳ್ಳೋ ಗೊತ್ತಿಲ್ಲ ಮತ್ತು ಈ ಆಪಾದನೆಗಳು ಸಧ್ಯಕ್ಕೆ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಆದರೇ ಈ ಅಪಾದನೆಗಳಿಂದ ಶ್ರೀ ಕ್ಷೇತ್ರಕ್ಕೆ ಮತ್ತು ಸ್ವಾಮಿ ಮಂಜುನಾಥನ ಪಾವಿತ್ರತೆ ಮತ್ತು ನಂಬಿಕೆಗೆ ಧಕ್ಕೆಯಾಗುತ್ತಿದೆ.
ತಾವುಗಳು ಮತ್ತು ತಮ್ಮ ಕುಟುಂಬವು ಕರ್ನಾಟದ ಜನತೆ, ಕನ್ನಡಿಗರು ಸ್ವಾಮಿ ಮಂಜುನಾಥನ ಭಕ್ತರು ಇಷ್ಟು ವರ್ಷ ತಮ್ಮ ಮೇಲಿಟ್ಟಿದ್ದ ಅಭಿಮಾನ ಮತ್ತು ಪ್ರೀತಿಗೆ ಬೆಲೆ ಮತ್ತು ಗೌರವ ಕೊಟ್ಟು ಈ ಕೂಡಲೇ ತಮ್ಮ ಧರ್ಮಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸ್ವಾಮಿ ಮಂಜುನಾಥನ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ವೀರೇಂದ್ರಬಾಬು ನಂಜೇಗೌಡ ಮನವಿ ಮಾಡಿಕೊಂಡಿದ್ದಾರೆ.